ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಾಲುವೆ, ಚರಂಡಿಯ ನೀರು ರಸ್ತೆಯ ಮೇಲೆ ಹರಿದ ಪರಿಣಾಮ ದೆಹಲಿಯ ಐಟಿಓ ಬಳಿಯಲ್ಲಿ 10 ಮನೆಗಳು ಕೊಚ್ಚಿಕೊಂಡು ಹೋಗಿವೆ. ಮನೆಗಳು ಬೀಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Advertisement
ಐಟಿಓ ಬಳಿಯ ಅನ್ನಾ ನಗರದಲ್ಲಿ 10 ಮನೆಗಳನ್ನು ಕಾಲುವೆ ಆಹುತಿ ಪಡೆದುಕೊಂಡಿದೆ. ಈ ಪ್ರದೇಶದಲ್ಲಿ ಡಬ್ಲ್ಯೂಹೆಚ್ಓ ಗೆ ಸಂಬಂಧಿಸಿದ ಹೆಡ್ಕ್ವಾಟರ್ ನಿರ್ಮಿಸಲಾಗುತ್ತಿದ್ದು, ನೀರು ರಸ್ತೆಯ ಮೇಲೆ ಹರಿಯುತ್ತಿದೆ ಎಂದು ವರದಿಯಾಗಿದೆ. ಈ ಪ್ರದೇಶದ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಮನೆಗಳು ಕೊಚ್ಚಿಕೊಂಡ ಹೋಗಿದ್ದರಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಪ್ರಾಣ ಹಾನಿ ಆಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
Advertisement
Advertisement
ದೆಹಲಿ ಮಳೆಗೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗಿವೆ. ದೂರದಿಂದ ಮನೆಯಿಂದ ಹೊರಗೆ ಬನ್ನಿ ಎಂದು ಜೋರಾಗಿ ಹೇಳುತ್ತಿರೋದನ್ನು ಗಮನಿಸಕಬಹುದು. ನಗರದ ಮಿಂಟೋ ಬ್ರಿಜ್ ಮುಳುಗಡೆಯಾಗುವ ಸಾಧ್ಯತೆಗಳಿವೆ.
Advertisement
Rain: A blessing to some, curse to others!
This is absolutely shocking. This happened in a slum in Anna Nagar, near ITO in Delhi. pic.twitter.com/ghtnIYEmzu
— Fareeha Iftikhar (@Iftikharfariha) July 19, 2020