-ಸೋಲಿಲ್ಲದ ಸರದಾರ ಇನ್ನು ನೆನಪು ಮಾತ್ರ
ನವದೆಹಲಿ: ಕೊರೊನಾದಿಂದ ನಿಧನರಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ ಇಂದು ಸಂಜೆ ದೆಹಲಿಯ ಧ್ವಾರಕಾ ನಂಬರ್ ಸೆಕ್ಟರ್ನಲ್ಲಿರುವ ಲಿಂಗಾಯತ ಸ್ಮಶಾನದಲ್ಲಿ ನಡೆಯಿತು.
https://twitter.com/ShobhaBJP/status/1309097330818326529
Advertisement
ಕೊರೊನಾ ನಿಯಮಾವಳಿ ಅನುಸಾರ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಗಡಿ ಅವರ ಅಂತ್ಯಕ್ರಿಯೆ ನಡೆಯಿತು. ಲಿಂಗಾಯತ ಸಂಪ್ರದಾಯದಂತೆ ಸುರೇಶ್ ಅಂಗಡಿ ಕುಟುಂಬಸ್ಥರ ಆಪ್ತ ಬಾಳಯ್ಯ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ರಾಜ್ಯ ಸರ್ಕಾರದ ಪರವಾಗಿ ಸಚಿವರಾದ ಶೆಟ್ಟರ್, ಸವದಿ, ರಮೇಶ್ ಜಾರಕಿಹೊಳಿ ಪಾಲ್ಗೊಂಡಿದ್ದರು.
Advertisement
ದೆಹಲಿಯ ಕರ್ನಾಟಕ ಭವನದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಶ್ರೀ ಸುರೇಶ್ ಅಂಗಡಿಯವರಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು. pic.twitter.com/asQJ6G8YQB
— B Y Raghavendra (@BYRBJP) September 24, 2020
Advertisement
ಸುರೇಶ್ ಅಂಗಡಿ ಅಂತ್ಯಕ್ರಿಯೆಗೂ ಮುನ್ನ ದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರಿಂದ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯ್ತು. ಕುಟುಂಬಸ್ಥರಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಹಲವು ಗಣ್ಯರು ಸಾಂತ್ವನ ಹೇಳಿದರು.