ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ ಹಾಗೂ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದ ನಟ, ಗಾಯಕ ದೀಪ್ ಸಿಧುನನ್ನು ದೆಹಲಿಯ ತೀಸ್ ಹಜಾರಿ ಕೋರ್ಟ್ 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಇಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯಕ್ಕೆ ದೀಪ್ ಸಿಧುನನ್ನು ವಿಶೇಷ ಪೊಲೀಸ್ ತಂಡ ಹಾಜರುಪಡಿಸಿದ್ದು, ಈ ವೇಳೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು. ಆದರೆ ನ್ಯಾಯಾಲಯ 7 ದಿನಗಳ ಕಾಲ ಕಸ್ಟಡಿಗೆ ವಹಿಸಿದೆ.
Advertisement
Advertisement
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ದೀಪ್ ಸಿಧು ಹಿಂಸೆಗೆ ಪ್ರಚೋದನೆ ನೀಡಿದ್ದು, ಮಾತ್ರವಲ್ಲದೆ ಕೆಂಪು ಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದ. ಈ ಮೂಲಕ ದೆಹಲಿಯಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದ್ದ. ದೆಹಲಿ ಗಲಭೆ ಪ್ರಕಣದಲ್ಲಿ ದೀಪ್ ಸಿಧು ಪ್ರಮುಖ ಆರೋಪಿಯಾಗಿದ್ದು, ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ. ಇಂದು ಬೆಳಗ್ಗೆ ಚಂಡೀಗಢ ಹಾಗೂ ಅಂಬಾಲಾ ನಡುವಿನ ಝಾರಕ್ಪುರ ಪ್ರದೇಶದಲ್ಲಿ ದೀಪ್ ಸಿಧುನನ್ನು ಬಂಧಿಸಲಾಗಿತ್ತು.
Advertisement
ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್ಬುಕ್ ಲೈವ್ ಮಾಡಿದ್ದ. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಸಹ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿದೆ.
Advertisement
#WATCH| Delhi Police Special Cell arrests Deep Sidhu, an accused in 26th Jan violence in Delhi pic.twitter.com/cb6tN5eR1u
— ANI (@ANI) February 9, 2021
ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ತಲೆ ಮರೆಸಿಕೊಂಡಿದ್ದನು. ಈ ಹಿನ್ನೆಲೆ ಸಿಧು ಹಾಗೂ ಇತರೆ ಮೂವರು ಆರೋಪಿಗಳ ಕುರಿತಾಗಿ ಮಾಹಿತಿ ನೀಡಿದರೆ 1 ಲಕ್ಷ ರೂ. ನೀಡುವುದಾಗಿ ಪೊಲೀಸರು ಬಹುಮಾನ ಪ್ರಕಟಿಸಿದ್ದರು. ಸಿಧುನ ಹುಡುಕಾಟದಲ್ಲಿರುವ ಪೊಲೀಸರಿಗೆ ಸಿಧು ತನ್ನ ಗೆಳತಿಯ ಫೋನ್ ಬಳಕೆ ಮಾಡುತ್ತಿದ್ದಾನೆ ಎಂದು ಸುಳಿವು ಸಿಕ್ಕಿದೆ. ಈ ಕುರಿತಾಗಿ ಮಾಹಿತಿ ಪಡೆದ ಪೊಲೀಸ್ ತಂಡ ಸಿಧು ಇದ್ದ ಸ್ಥಳವನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ.
ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ರೈತ ಪ್ರತಿಭಟನೆಗೆ ನನ್ನನ್ನೇ ಸಮರ್ಪಿಸಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆನು. ಆದರೆ ಗಣರಾಜ್ಯೋತ್ಸವದ ಗಲಭೆ ನಂತರ ರೈತ ಸಂಘಟನೆಗಳು, ರೈತ ಮುಖಂಡರು ನನ್ನನ್ನು ಕಡೆಗಣಿಸುತ್ತಿದ್ದಾರೆ. ನಾನು ಪಂಜಾಬ್ ಜನರಿಗಾಗಿ ಧ್ವನಿ ಎತ್ತಿದೆ. ಕೆಂಪು ಕೋಟೆಯಲ್ಲಿ ಹಲವು ನಾಯಕರು ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಜನರು ಇದ್ದರು. ಆದರೆ ನನ್ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ. ನಾನೀಗ ಬಿಹಾರದ ಕಾರ್ಮಿಕರೊಂದಿಗೆ ಇದ್ದೇನೆ ಎಂದು ಫೇಸ್ಬುಕ್ ವೀಡಿಯೋದಲ್ಲಿ ದೀಪ್ ಸಿಧು ಕಣ್ಣೀರು ಹಾಕಿದ್ದ.