– ಕರ್ನಾಟಕ ರೈತರಿಂದ ದೆಹಲಿ ಚಲೋ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಾವೇರುತ್ತಿರುವ ರೈತರ ಪ್ರತಿಭಟನೆಗೆ ಕರ್ನಾಟಕ ರಾಜ್ಯದ ರೈತರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನೂರಾರು ರೈತರು ದೆಹಲಿ ತಲುಪಿದ್ದಾರೆ.
Advertisement
ಕರ್ನಾಟಕ ಮೂಲೆ ಮೂಲೆಗಳಿಂದ ಸಾವಿರಾರು ರೈತರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ತಂಡೋಪತಂಡವಾಗಿ ರಾಜ್ಯದ ರೈತರು ದೆಹಲಿಗೆ ಹೊರಡುತ್ತಿದ್ದಾರೆ. ಈಗಾಗಲೇ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಗಾಝೀಪುರ ಗಡಿಗೆ ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಿದ್ರು. ರೈತ ಮುಖಂಡ ರಾಕೇಶ್ ಟಿಕಾಯತ್ ಜೊತೆ ಹೋರಾಟದ ರೂಪು ರೇಷೆಗಳ ಬಗ್ಗೆ ಚರ್ಚೆ ಮಾಡಿದರು.
Advertisement
Advertisement
ಇಂದೂ ಸಹ ದೆಹಲಿಗೆ ರಾಜ್ಯದಿಂದ ಹಲವು ಸಾವಿರಾರು ರೈತರು ಬರಲಿದ್ದಾರೆ. ನಾಳೆಯ ಹೆದ್ದಾರಿ ಬಂದ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ರೈತರಿಗೆ ಕೇಂದ್ರ ಮಾಡ್ತಿರುವ ಅನ್ಯಾಯದ ವಿರುದ್ಧ ಒಂದಾಗಿದ್ದೇವೆ ಎಂದು ಕೋಡಿಹಳ್ಳಿ ತಿಳಿಸಿದ್ರು. ಅಲ್ಲದೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಕೋಡಿಹಳ್ಳಿ ಸಿಂಘು, ಟಿಕ್ರಿ ಗಡಿಗೂ ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಲಿದ್ದಾರೆ.
Advertisement
ಬೆಂಗಳೂರು ಮೂಲದ ಯುವತಿ ಸಿಂಧು ಎಂಬವರು ಏಕಾಂಗಿಯಾಗಿ ಗಾಝೀಪುರ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಕನ್ನಡದಲ್ಲಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದರು. ಒಟ್ಟಿನಲ್ಲಿ ಕಾವೇರುತ್ತಿರುವ ಅನ್ನದಾತರ ಪ್ರತಿಭಟನೆಗೆ ವಿಶ್ವದಾದ್ಯಂತ ಎಲ್ಲ ಕ್ಷೇತ್ರದ ಸೆಲಬ್ರಿಟಿಗಳು ಸಾಥ್ ನೀಡುತ್ತಿದ್ದಾರೆ. ಈ ಮಣ್ಣಿನ ಮಕ್ಕಳ ಪ್ರತಿಭಟನೆ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.