ನವದೆಹಲಿ: ಬೆಸ-ಸಮ ಆಧಾರದ ಮೇಲೆ ಮಾಲ್ಗಳು, ಅಂಗಡಿ ಮುಗ್ಗಟ್ಟು, ಮಾರುಕಟ್ಟೆ ಓಪನ್, ದೆಹಲಿ ಸರ್ಕಾರ ಕೊರೊನಾ ಲಾಕ್ಡೌನ್ ನಿಂದ ಕೊಂಚ ಮಟ್ಟದ ಬಿಡುಗಡೆಯನ್ನು ನೀಡಲು ಇಂದು ಅನುಮತಿಯನ್ನು ನೀಡಿದೆ.
Lockdown will continue with more relaxation in other activities. Markets, malls to be opened on odd-even basis: Delhi CM Arvind Kejriwal pic.twitter.com/W75QuXMliJ
— ANI (@ANI) June 5, 2021
Advertisement
ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಕಷ್ಟಕರವಾದ ಪರಿಸ್ಥಿತಿ ಸುಧಾರಿಸುತ್ತಿದೆ ಹೀಗಾಗಿ ಲಾಕ್ಡೌನ್ ಮುಂದುವರೆಯುತ್ತದೆ. ಆದರೆ ಕೊಂಚ ಮಟ್ಟಿಗೆ ಸಡಿಲ ಗೊಳಿಸುತ್ತಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ. ಇದನ್ನೂ ಓದಿ: ರೈತರಿಗೆ ಉಚಿತ ಗೊಬ್ಬರ, ಬಿತ್ತನೆ ಬೀಜ ಕೊಡಿ ಸಿಎಂಗೆ ಸಿದ್ದರಾಮಯ್ಯ ಮನವಿ
Advertisement
Delhi Metro to resume services with 50% capacity: Delhi CM Arvind Kejriwal pic.twitter.com/1G0AvEeA8R
— ANI (@ANI) June 5, 2021
Advertisement
* ಮಾಲ್ಗಳು ಮತ್ತು ಶಾಪಿಂಗ್ ಕೇಂದ್ರಗಳು ಬೆಸ-ಸಮ ಆಧಾರದ ಮೇಲೆ ತೆರೆಯಲ್ಪಡುತ್ತವೆ. ಒಂದು ದಿನ ಅರ್ಧ ಅಂಗಡಿಗಳು, ಇನ್ನೊಂದು ಅರ್ಧ ಮರುದಿನ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳು ಮತ್ತು ರಸಾಯನಿಕ ಅಂಗಡಿಗಳನ್ನು ಎಲ್ಲಾ ದಿನಗಳಲ್ಲಿ ತೆರೆಯಬಹುದು. ಬೆಸ-ಸಮ ನಿಯಮವು ಅವರಿಗೆ ಅನ್ವಯಿಸುವುದಿಲ್ಲ.ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಸಾಧ್ಯತೆ
Advertisement
The private offices will be allowed to function with 50% staff. Group A staff of government offices will be allowed to function with 100%, group B with 50% staff: Delhi Chief Minister Arvind Kejriwal
— ANI (@ANI) June 5, 2021
* ಖಾಸಗಿ ಕಚೇರಿಗಳು ಶೇಕಡಾ 50 ರಷ್ಟು ಉದ್ಯೋಗಿಗಳ ಮಿತಿಯಲ್ಲಿ ಮಾತ್ರ ಕೆಲಸವನ್ನು ಆರಂಭಿಸ ಬಹುದಾಗಿದೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರು ಇದನ್ನು ಮುಂದುವರಿಸಿ. ಸಾರ್ವಜನಿಕ ವಲಯದ ಕಚೇರಿಗಳಲ್ಲಿ ಎ ವರ್ಗ ಉದ್ಯೋಗಿಗಳು ಎಲ್ಲಾ ದಿನಗಳಲ್ಲಿ ಕೆಲಸ ಮಾಡಬಹುದು, ಆದರೆ ಅವರ ಅಡಿಯಲ್ಲಿರುವ ಎಲ್ಲಾ ವರ್ಗಗಳು ಕೇವಲ 50 ಪ್ರತಿಶತದಷ್ಟು ಸಾಮಥ್ರ್ಯದ ಜನರು ಮಾತ್ರ ಕೆಲಸ ಮಾಡಿ. ಮೆಟ್ರೋ ಸಹ ಸೇ.50 ರಷ್ಟು ಆಸನ ಸಾಮಥ್ರ್ಯದಲ್ಲಿ ಚಲಿಸಲಿದೆ.
We are ready to combat the third wave of #COVID19. We have set up a pediatric task force: Delhi CM Arvind Kejriwal pic.twitter.com/0YmGEWEHIs
— ANI (@ANI) June 5, 2021
ಕೊರೊನಾ ಮೂರಲೇ ಅಲೆಗೆ ನಾವು ಸಾಕಷ್ಟು ಸಿದ್ದತೆಯನ್ನು ಮಾಡುಕೊಳ್ಳುತ್ತಿದ್ದೇವೆ. ನಾವು ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸಿದ್ದೇವೆ. ನಾವು ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದ್ದೇವೆ. ನಾವು ಮೊದಲು ನಮ್ಮದೇ ಆದ ಆಮ್ಲಜಕನ ಘಟವನ್ನು ಹೊಂದಿರದ ಕಾರಣ ನಾವು ಆಮ್ಲಜನಕ ಟ್ಯಾಂಕರ್ಗಳನ್ನು ಸಹ ಸಂಗ್ರಹಿಸುತ್ತಿದ್ದೇವೆ. ಅಂತಹ 25 ಟ್ಯಾಂಕರ್ಗಳನ್ನು ನಾವು ಖರೀದಿಸುತ್ತಿದ್ದೇವೆ.
Two genome sequencing labs to be set up for detection of new variants, if any: Delhi CM Arvind Kejriwal pic.twitter.com/bLrxAcqjD7
— ANI (@ANI) June 5, 2021
ದೆಹಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಶುಕ್ರವಾರ 523 ಹೊಸ ಕೊರೊನಾ ಪ್ರಕರಣಗಳು ಮತ್ತು 50 ಸಾವುನೋವುಗಳು ದಾಖಲಾಗಿವೆ. ಪಾಸಿಟಿವಿಟಿ ರೇಟ್ ಶೇ.0.68ರಷ್ಟಿದೆ. ಕೊರೊನಾದಿಂದ ಹಾನಿಗೊಳಗಾದ ರಾಜ್ಯಗಳಲ್ಲಿ ದೆಹಲಿ ಕೂಡ ಒಂದಾಗಿದೆ ಎಂದರು.