ಬೆಂಗಳೂರು: ಸ್ಯಾಂಡಲ್ವುಡ್ ನಂತೆ ಬಾಲಿವುಡ್ ನಲ್ಲಿಯೂ ಡ್ರಗ್ಸ್ ಹೊಗೆಯಾಡುತ್ತಿದ್ದು, ನಟ- ನಟಿಯ ವಿಚಾರಣೆ ನಡೆಯುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೊಣೆಯವರನ್ನು ಕೂಡ ಎನ್ಸಿಬಿ ವಿಚಾರಣೆಗೆ ಕರೆದಿದ್ದು, ದೀಪಿಕಾರನ್ನು ರೋಲ್ ಮಾಡೆಲ್ ಆಗಿ ಹಿಂಬಾಲಿಸ್ತಿರೋರಿಗೆ ಬೇಸರದ ಸಂಗತಿ ಎಂದು ನಟಿ ಕಂ ರಾಜಕಾರಣಿ ಮಾಳವಿಕಾ ಅವಿನಾಶ್ ತಿಳಿಸಿದ್ದಾರೆ.
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಖಿನ್ನತೆ ಎನ್ನುವ ಕಥೆ ಕಟ್ಟಿ, ಆ ಮೂಲಕ ದೀಪಿಕಾ ಸಾಮಾಜಿಕ ಕಳಕಳಿಯ ಪ್ರಚಾರ ಪಡೆದಿರುವ ವಿಚಾರ ನಿಮಗೆಲ್ಲ ತಿಳಿದೇ ಇದೆ. ಇದೀಗ ‘ಮಾಲ್’ ಎಂಬ ಹೊಗೆ ಅವರನ್ನೇ ಆವರಿಸಿದೆ. ಈ ವಿಚಾರ ಅವರನ್ನೇ ರೋಲ್ ಮಾಡೆಲ್ ಎಂದು ಹಿಂಬಾಲಿಸುತ್ತಿರುವವರಿಗೆ ನಿಜಕ್ಕೂ ಬೇಸರದ ಸಂಗತಿ ಎಂದು ಮಾಳವಿಕಾ ಹೇಳಿದ್ದಾರೆ.
Advertisement
With all that’s going on,
this whole story of depression being a clinical disorder,
advertising “overcoming” it like she had great social concern!
The smoke of her ‘Maal’ now engulfs it all…
Sad for those who thought her to be a role model #BollywoodCleanup
— Malavika Avinash (@MalavikaBJP) September 25, 2020
Advertisement
ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯ ಮಧ್ಯೆ ಡ್ರಗ್ಸ್ ಪ್ರಕರಣ ಹೊರಬಿದ್ದಿದೆ. ನಟನ ಆತ್ಮಹತ್ಯೆಗೆ ಖಿನ್ನತೆ ಕಾರಣ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ, ದೀಪಿಕಾ ಪ್ರತಿಕ್ರಿಯಿಸಿದ್ದರು. ತಾನು ಖಿನ್ನತೆಯನ್ನು ಎದುರಿಸಿ ಹೇಗೆ ಅದರಿಂದ ಹೊರಗೆ ಬಂದೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಸಲಹೆ ಕೂಡ ನೀಡಿದ್ದರು.
Advertisement
ಡ್ರಗ್ಸ್ ಸಂಬಂಧಿಸಿದಂತೆ ಕೇವಲ ದೀಪಿಕಾ ಮಾತ್ರವಲ್ಲದೆ ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿಖಾನ್ ಗೆ ಎನ್ಸಿಬಿ ಸಮನ್ಸ್ ನೀಡಿದೆ. ಕೆಲ ದಿನಗಳ ಹಿಂದೆ ಡ್ರಗ್ಸ್ ಖರೀದಿಗಾಗಿ ದೀಪಿಕಾ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಚಾಟ್ ಮಾಹಿತಿಯನ್ನು ಖಾಸಗಿ ವಾಹಿನಿ ಬಿತ್ತರಿಸಿತ್ತು. ಇತ್ತ ರಕುಲ್ ಪ್ರೀತ್ ಸಿಂಗ್ ಮಾಧ್ಯಮಗಳಿಂದ ತಮ್ಮ ತೇಜೋವಧೆ ಆಗುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಬಳಿ ಮಾಲ್ ಇದೆಯಾ ಎಂದು ದೀಪಿಕಾ ಕೇಳಿರುವ ವಾಟ್ಸಪ್ ಚಾಟ್ ಸ್ಕ್ರೀನ್ಶಾಟ್ ರಿವೀಲ್ ಆಗಿತ್ತು ಹ್ಯಾಶ್ ಕೇಳಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು. ಆದ್ರೆ ಇದುವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.