ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಭಾನುವಾರ, ಪುಬ್ಬ ನಕ್ಷತ್ರ
ರಾಹುಕಾಲ: ಸಂಜೆ 5:02 ರಿಂದ 6:37
ಗುಳಿಕಕಾಲ: ಮಧ್ಯಾಹ್ನ 3:28 ರಿಂದ 5:02
ಯಮಗಂಡಕಾಲ: ಮಧ್ಯಾಹ್ನ 12:29 ರಿಂದ 1:54
Advertisement
ಮೇಷ: ಭವಿಷ್ಯದ ಆಲೋಚನೆ, ಚಂಚಲ ಸ್ವಭಾವ, ಹೆತ್ತವರಲ್ಲಿ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ, ಅಲ್ಪ ಧನ ಲಾಭ, ಹೇಳಿಕೆ ಮಾತನ್ನು ಕೇಳುವ ಸಾಧ್ಯತೆ, ವಾರಾಂತ್ಯದಲ್ಲಿ ದಾಂಪತ್ಯದಲ್ಲಿ ಅನ್ಯೋನ್ಯತೆ.
Advertisement
ವೃಷಭ: ಕ್ರಯ ವಿಕ್ರಯಗಳಿಂದ ಲಾಭ, ಕುಟುಂಬದಲ್ಲಿ ದ್ವೇಷ, ಇಲ್ಲ ಸಲ್ಲದ ಅಪವಾದ ನಿಂದನೆ, ಅನ್ಯರ ಷಡ್ಯಂತ್ರಕ್ಕೆ ಬೀಳುವಿರಿ, ಅಪರಿಚಿತರಿಂದ ಎಚ್ಚರಿಕೆ, ಶತ್ರುಗಳ ಬಾಧೆ, ದುಷ್ಟ ಚಿಂತನೆ, ಮಾತಿನ ಚಕಮಕಿ.
Advertisement
ಮಿಥುನ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಸ್ಥಳ ಬದಲಾವಣೆ, ನೀಚ ಜನರ ಸಹವಾಸ, ದುಶ್ಚಟಗಳಿಂದ ತೊಂದರೆ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
Advertisement
ಕಟಕ: ಮಾನಸಿಕ ಒತ್ತಡ, ದುಷ್ಟ ಆಲೋಚನೆ, ತೀರ್ಥಕ್ಷೇತ್ರ ದರ್ಶನ, ಸಾಲಗಾರರಿಂದ ತೊಂದರೆ, ಆಲಸ್ಯ ಮನೋಭಾವ, ವೃಥಾ ತಿರುಗಾಟ, ದೂರ ಪ್ರಯಾಣಕ್ಕೆ ಮನಸ್ಸು, ವಾರಾಂತ್ಯದಲ್ಲಿ ಮನಸ್ಸಿನಲ್ಲಿ ಭಯ ನಿವಾರಣೆ.
ಸಿಂಹ: ಅಧಿಕ ಧನವ್ಯಯ, ಉಳಿತಾಯದ ಬಗ್ಗೆ ಗಮನಹರಿಸಿ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ದ್ರವ್ಯ ನಷ್ಟ, ಅತಿಯಾದ ಕೋಪ, ದಾಂಪತ್ಯದಲ್ಲಿ ವಿರಸ, ಸಣ್ಣ ವಿಚಾರಗಳಿಂದ ಕಲಹ, ಉತ್ತಮ ಬುದ್ಧಿ ಶಕ್ತಿ.
ಕನ್ಯಾ: ಹಿರಿಯರಿಂದ ಬೆಂಬಲ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಉದ್ಯೋಗದಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಏರುಪೇರು, ವಾರಾಂತ್ಯದಲ್ಲಿ ಮನಃಕ್ಲೇಷ.
ತುಲಾ: ಉದ್ಯೋಗ ಸ್ಥಳದಲ್ಲಿ ತೊಂದರೆ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ನೀವಾಡುವ ಮಾತಿನಿಂದ ಮನಃಕ್ಲೇಷ, ಆಸ್ತಿ ವಿಚಾರದಲ್ಲಿ ಕಲಹ, ಮಾನಸಿಕ ಕಿರಿಕಿರಿ, ಬಂಧುಗಳಿಂದ ನಿಂದನೆ, ಈ ವಾರ ಅಲ್ಪ ಲಾಭ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಮಾತಿನ ಮೇಲೆ ಹಿಡಿತ ಅಗತ್ಯ, ಋಣ, ಸಾಲ ಬಾಧೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಚಂಚಲ ಮನಸ್ಸು, ಶೀತ ಸಂಬಂಧಿತ ರೋಗ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.
ಧನಸ್ಸು: ಉತ್ತಮ ಬುದ್ಧಿಶಕ್ತಿ, ಶತ್ರುಗಳ ಬಾಧೆ, ಅನ್ಯರಿಗೆ ಉಪಕಾರ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು, ಅಧಿಕ ತಿರುಗಾಟ, ಹಣಕಾಸು ನಷ್ಟ, ಕೆಲಸದಲ್ಲಿ ವಿಳಂಬ, ಋಣ ವಿಮೋಚನೆ.
ಮಕರ: ದೂರ ಪ್ರಯಾಣ, ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಚೋರ ಭಯ, ಕುತಂತ್ರದಿಂದ ಹಣ ಸಂಪಾದನೆ, ಪ್ರಯಾಣ ಮಾಡುವ ಪ್ರಸಂಗ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.
ಕುಂಭ: ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ವಿಪರೀತ ದುಶ್ಚಟ, ಸಾಧಾರಣ ಪ್ರಗತಿ, ಸ್ವಯಂಕೃತ್ಯಗಳಿಂದ ನಷ್ಟ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಮುಗ್ಗಟ್ಟು, ಅಲ್ಪ ಲಾಭ.
ಮೀನ: ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರಿಂದ ಹಿತನುಡಿ, ಅಲ್ಪ ಲಾಭ, ಅಧಿಕ ಖರ್ಚು, ಸ್ತ್ರೀಯರಿಗೆ ಅನುಕೂಲ, ಇಷ್ಟವಾದ ವಸ್ತಗಳ ಖರೀದಿ ಯೋಗ, ಮಾನಸಿಕ ನೆಮ್ಮದಿ.