ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು,ಜೇಷ್ಠ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಬುಧವಾರ, ಶ್ರವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:23 ರಿಂದ 1:59
ಗುಳಿಕಕಾಲ: ಬೆಳಗ್ಗೆ 10:47 ರಿಂದ 12:23
ಯಮಗಂಡಕಾಲ: ಬೆಳಗ್ಗೆ 7:55 ರಿಂದ 9:11
Advertisement
ಮೇಷ: ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಶುಭ ಕಾರ್ಯಗಳಲ್ಲಿ ಭಾಗಿ, ಬಂಧುಗಳ ಆಗಮನ, ಸುಖ ಭೋಜನ ಪ್ರಾಪ್ತಿ.
Advertisement
ವೃಷಭ: ಮೌನವಾಗಿರುವುದು ಉತ್ತಮ, ಬಂಧುಗಳಿಂದ ತೊಂದರೆ, ಸ್ಥಳ ಬದಲಾವಣೆ, ಸ್ಥಿರಾಸ್ತಿ ಗಳಿಕೆ, ಕಾರ್ಯಗಳಲ್ಲಿ ವಿಳಂಬ.
Advertisement
ಮಿಥುನ: ಹಿರಿಯರ ಮಾತಿಗೆ ಮನ್ನಣೆ, ಮುಂಗೋಪ ಅಧಿಕ, ಆತುರ ಸ್ವಭಾವದಿಂದ ತೊಂದರೆ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹಣಕಾಸು ಬಗ್ಗೆ ಎಚ್ಚರಿಕೆ.
Advertisement
ಕಟಕ: ಯತ್ನ ಕಾರ್ಯಗಳಲ್ಲಿ ಪ್ರಗತಿ, ಅಧಿಕ ಧನ ಲಾಭ, ಸ್ತ್ರೀಯರಿಗೆ ಅನುಕೂಲ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ, ಶುಭ ಫಲ ಯೋಗ.
ಸಿಂಹ: ದ್ರವ್ಯ ಲಾಭ, ದುಃಖದಾಯ ಪ್ರಸಂಗ, ರೋಗ ಬಾಧೆ, ಪರರಿಗೆ ಸಹಾಯ ಮಾಡುವಿರಿ, ಮಾನಸಿಕ ನೆಮ್ಮದಿ, ಹಣಕಾಸು ವಿಚಾರದಲ್ಲಿ ಎಚ್ಚರ.
ಕನ್ಯಾ: ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉತ್ತಮ ಗೌರವ ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು, ನೌಕರಿಯಲ್ಲಿ ಉತ್ತಮ ಬೆಳವಣಿಗೆ, ಸಹೋದ್ಯೋಗಿಗಳಿಂದ ಸಹಕಾರ.
ತುಲಾ: ಮಹಿಳೆಯರಿಗೆ ಉತ್ತಮ ಫಲ, ನಾನಾ ರೀತಿಯ ಸಂಪಾದನೆ, ಹಿತೈಷಿಗಳಿಂದ ಸಲಹೆ, ಶ್ರದ್ಧೆ, ಶ್ರಮಕ್ಕೆ ತಕ್ಕ ಫಲ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ವೃಶ್ಚಿಕ: ನೀವಾಡುವ ಮಾತಿನಿಂದ ಗೌರವ, ಸ್ನೇಹಿತರ ಸಕಾರಾತ್ಮಕ ಸಲಹೆ, ನಿಮ್ಮ ಮಾತಿಗೆ ಮನ್ನಣೆ, ಸುಖ ಭೋಜನ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಆಲೋಚನೆ.
ಧನಸ್ಸು: ಮಾತಿನ ಮೇಲೆ ಹಿಡಿತ ಅಗತ್ಯ, ಅನ್ಯಕರಿಗೆ ಉಪಕಾರ ಮಾಡುವಿರಿ, ಅಧಿಕವಾದ ತಿರುಗಾಟ, ಋಣ ವಿಮೋಚನೆ.
ಮಕರ: ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ, ಸ್ತ್ರೀಯರಿಗೆ ಅನುಕೂಲ, ಮಾನಸಿಕ ನೆಮ್ಮದಿ ಪ್ರಾಪ್ತಿ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಹಣಕಾಸು ಮುಗ್ಗಟ್ಟು.
ಕುಂಭ: ಸ್ನೇಹಿತರಿಂದ ಸಹಾಯ, ಅತಿಯಾದ ಕೋಪ, ಚೋರ ಭಯ, ತಾಳ್ಮೆ ಅತ್ಯಗತ್ಯ, ಹಣಕಾಸು ಸಮಸ್ಯೆ. ಅಧಿಕ ಖರ್ಚು, ಅಲ್ಪ ಲಾಭ.
ಮೀನ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮಾನಸಿಕ ಕಿರಿಕಿರಿ, ಚಂಚಲ ಸ್ವಭಾವ, ಹೇಳಿಕೆ ಮಾತು ಕೇಳುವುದರಿಂದ ಸಂಕಷ್ಟ, ಯೋಚಿಸಿ ನಿಧಾರ ಕೈಗೊಳ್ಳುವುದು ಉತ್ತಮ.