ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣಪಕ್ಷ, “ತೃತೀಯ/ಚತುರ್ಥಿ”
ಶನಿವಾರ, ರೇವತಿ ನಕ್ಷತ್ರ.
ರಾಹುಕಾಲ : 9:17 ರಿಂದ 10:49
ಗುಳಿಕಕಾಲ : 6:12 ರಿಂದ 7:45
ಯಮಗಂಡಕಾಲ : 1:53 ರಿಂದ 3:25
ಮೇಷ: ವಿದ್ಯಾರ್ಥಿಗಳಲ್ಲಿ ಅಧ್ಯಯನದ ಕಡೆ ಆಸಕ್ತಿ ಕಡಿಮೆ, ಮಿತ್ರರು ಶತ್ರುಗಳಾಗುವರು, ಅಧಿಕ ಸುಸ್ತು, ನರದೌರ್ಬಲ್ಯ, ಚರ್ಮ ತುರಿಕೆ, ತಲೆನೋವು.
Advertisement
ವೃಷಭ: ಉನ್ನತ ವಿದ್ಯಾಭ್ಯಾಸದ ಹಂಬಲ, ಆರ್ಥಿಕ ಪರಿಸ್ಥಿತಿಯಿಂದ ವಿದ್ಯಾಭ್ಯಾಸದಲ್ಲಿ ತೊಡಕು, ಸಂಸಾರದಲ್ಲಿ ಕಲಹ ಮತ್ತು ಮನಸ್ತಾಪ, ಉದ್ಯೋಗದಲ್ಲಿ ಒತ್ತಡಗಳು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ.
Advertisement
ಮಿಥುನ: ಶತ್ರುಗಳು ಅಧಿಕ, ಅನಾರೋಗ್ಯ ಸಮಸ್ಯೆಗಳು, ಮಾಟ ಮಂತ್ರ ತಂತ್ರದ ಆತಂಕ.
Advertisement
ಕಟಕ: ಮಕ್ಕಳಿಂದ ಆಕಸ್ಮಿಕ ಧನ ನಷ್ಟ, ಆರೋಗ್ಯದಲ್ಲಿ ಏರುಪೇರು, ವಿದ್ಯಾಭ್ಯಾಸದಲ್ಲಿ ತೊಡಕು, ಬಂಧು ಬಾಂಧವರೊಂದಿಗೆ ಮನಸ್ತಾಪ.
Advertisement
ಸಿಂಹ: ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಮಹಿಳೆಯರಲ್ಲಿ ಆತಂಕ ದುಡುಕುತನ, ಹೆಚ್ಚು ಅಕ್ರಮ ವಿಷಯಗಳು ಬಯಲು.
ಕನ್ಯಾ: ವಿದ್ಯಾಭ್ಯಾಸ ನಿಮಿತ್ತ ದೂರ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಸ್ವಯಂಕೃತ ಅಪರಾಧದಿಂದ ಕಲಹಗಳು.
ತುಲಾ: ಮಕ್ಕಳ ವಿಚಾರವಾಗಿ ಕುಟುಂಬದಲ್ಲಿ ವಾಗ್ವಾದಗಳು, ಹಣಕಾಸಿನ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಕಲಹ, ದೂರ ಪ್ರಯಾಣ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ಮಕ್ಕಳಲ್ಲಿ ಒತ್ತಡ,ಮರೆವಿನ ಸ್ವಭಾವ, ಮಿತ್ರರಿಂದ ಚರಾಸ್ತಿ,ಭೂಮಿ ಪ್ರಾಪ್ತಿ.
ಧನಸ್ಸು: ಮಕ್ಕಳಲ್ಲಿ ಚುರುಕುತನ ಕಡಿಮೆ, ನೆರೆಹೊರೆಯವರಿಂದ ಆತ್ಮಗೌರವಕ್ಕೆ ಧಕ್ಕೆ, ಆತ್ಮೀಯ ಮಿತ್ರರು ದೂರ.
ಮಕರ: ಅನಾರೋಗ್ಯ ಸಮಸ್ಯೆಯಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರೊಂದಿಗೆ ಕಲಹಗಳು, ಸಮಸ್ಯೆಗಳು, ಶುಭಕಾರ್ಯಕ್ಕೆ ಕಾಲ ಕೂಡಿ ಬರುವುದು.
ಕುಂಭ: ಮಾಟ ಮಂತ್ರ ತಂತ್ರದ ಆತಂಕ, ಅನಾರೋಗ್ಯ ಸಮಸ್ಯೆಗಳು, ಆಸ್ಪತ್ರೆಗೆ ದಾಖಲಾಗುವ ಸಂಭವ, ಹಣಕಾಸಿನ ವಿಚಾರವಾಗಿ ಮೋಸ.
ಮೀನ: ವಿದ್ಯಾಭ್ಯಾಸ ಆರಂಭಕ್ಕೆ ಸಿದ್ಧತೆ, ದಂಪತಿಯಲ್ಲಿ ಮನಸ್ತಾಪಗಳು, ಆಸ್ತಿ ಮತ್ತು ವಾಹನ ನಷ್ಟ.