ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ ,
ಶರದೃತು, ಅಧಿಕ ಆಶ್ವಯುಜಮಾಸ,
ಕೃಷ್ಣ ಪಕ್ಷ, ದ್ವಿತೀಯ, ಶನಿವಾರ,
ರೇವತಿ ನಕ್ಷತ್ರ / ಅಶ್ವಿನಿ ನಕ್ಷತ್ರ”.
ರಾಹುಕಾಲ: 9:11 ರಿಂದ 10:41
ಗುಳಿಕಕಾಲ: 6:12 ರಿಂದ 07:41
ಯಮಗಂಡಕಾಲ: 01:41 ರಿಂದ 03:11
ಮೇಷ: ಆರ್ಥಿಕ ಸಮಸ್ಯೆಗಳು ಹೆಚ್ಚಾಗುವುದು, ಆಸೆಗಳಿಂದ ದೂರ ಇರುವ ಯೋಚನೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಕೆಲಸಗಳಲ್ಲಿ ಹಿನ್ನಡೆ, ಒತ್ತಡ ಮತ್ತು ನಿದ್ರಾಭಂಗ, ಅನಾರೋಗ್ಯದಿಂದ ಆತಂಕ, ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ.
Advertisement
ಮಿಥುನ: ಮಿತ್ರರಿಂದ ಭಾವನೆಗಳಿಗೆ ಪೆಟ್ಟು, ಪರಸ್ಪರ ದೂರ ಆಗುವ ಸಂದರ್ಭ, ಆರ್ಥಿಕ ಹಿನ್ನಡೆ.
Advertisement
ಕಟಕ: ಅನಾರೋಗ್ಯ ಸಮಸ್ಯೆ, ಲಾಭದ ಪ್ರಮಾಣ ಕುಂಠಿತ, ಐಷಾರಾಮಿ ಜೀವನದ ಆಲೋಚನೆಗಳಿಗೆ ಹಿನ್ನಡೆ.
Advertisement
ಸಿಂಹ: ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ, ಉದ್ಯೋಗದಲ್ಲಿ ಪ್ರಗತಿ ಕಾಣದೆ ಆತಂಕ, ಗೃಹ ಬದಲಾವಣೆ, ಸ್ಥಳ ಬದಲಾವಣೆ.
ಕನ್ಯಾ: ನಷ್ಟಗಳು ಅಧಿಕ, ಕೆಟ್ಟ ಆಲೋಚನೆಗಳು, ಪ್ರಯಾಣದಲ್ಲಿ ಹಿನ್ನಡೆ, ದಾಯದಿ ಕಲಹಗಳು.
ತುಲಾ: ಅನಾರೋಗ್ಯದಿಂದ ಉದ್ಯೋಗಕ್ಕೆ ರಜೆ, ಮಿತ್ರರಿಂದ ಕಲಹಗಳಿಗೆ ಮುಕ್ತಿ, ಸ್ವಂತ ವ್ಯಾಪಾರದಲ್ಲಿ ಭಾದೆ.
ವೃಶ್ಚಿಕ: ಸಂಗಾತಿಯ ಅಹಂಭಾವ, ಶತ್ರುವಿನ ಕಾಟ, ನಿದ್ರಾಭಂಗ ಸಾಧ್ಯತೆ.
ಧನಸ್ಸು: ಮಕ್ಕಳೊಂದಿಗೆ ಮನಸ್ತಾಪ, ವೇದನೆ ಅನುಭವಿಸುವ ಸಂದರ್ಭ, ಲಾಭದಲ್ಲಿ ಕುಂಠಿತ.
ಮಕರ: ಪ್ರೀತಿ-ಪ್ರೇಮದ ವಿಷಯಗಳಿಂದ ಕಲಹ, ಉದ್ಯೋಗ ಕಳೆದುಕೊಳ್ಳುವ ಭಯ, ಮಕ್ಕಳ ಭವಿಷ್ಯದ ಚಿಂತೆಗಳು, ಸಂತಾನದ ದೋಷಗಳು.
ಕುಂಭ: ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಸಾಲ ದೊರೆಯುವ ಸಂಭವ ಕಡಿಮೆ, ವಿಪರೀತ ಧೈರ್ಯ ಮತ್ತು ಸಾಹಸ, ಅದೃಷ್ಟಹೀನ ಎನ್ನುವ ಭಾವನೆ.
ಮೀನ: ನೆರೆಹೊರೆಯವರು ದೂರವಾಗುವ ಆತಂಕ, ಪ್ರಶಾಂತತೆಯ ವಾತಾವರಣ, ಕೋರ್ಟ್ ಕೇಸುಗಳಲ್ಲಿ ಜಯ, ಹಣಕಾಸಿನ ಚಿಂತೆಗಳು ಅಧಿಕ.