ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕೊರೊನಾ ನಿಯಂತ್ರಣ ವಿಚಾರದಲ್ಲಿ ಒಂದೊಂದೆ ಎಡವಟ್ಗಳನ್ನು ಮಾಡುತ್ತಿದೆ. ಕೇವಲ ಒಂದು ನಿರ್ಧಾರವನ್ನು ಕೂಡ ಸ್ವಂತವಾಗಿ ತೆಗೆದುಕೊಳ್ಳಲು ಅಸಮರ್ಥವಾಗಿರುವಂತೆ ಕಾಣುತ್ತಿದೆ.
ಯಾವುದೇ ಸಾಧಕ ಬಾಧಕಗಳನ್ನು ಪರಿಗಣಿಸದೇ, ಯಾರ ಅಭಿಪ್ರಾಯಮವನ್ನು ಕೇಳದೇ, ಪರಿಗಣಿಸದೇ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿಯುತ ನಿರ್ಧಾರಗಳು ಸರ್ಕಾರವನ್ನು ಮುಜುಗರ ತಂದಿಟ್ಟಿದೆ. ನೈಟ್ ಕರ್ಫ್ಯೂ ಬಗ್ಗೆ ನಿನ್ನೆಯಷ್ಟೇ ಹೊರಡಿಸಿದ್ದ ಆದೇಶವನ್ನು ಕೇವಲ 24 ಗಂಟೆಗಳಲ್ಲಿ ವಾಪಸ್ ಪಡೆದಿದೆ.
Advertisement
Advertisement
ನೈಟ್ ಕರ್ಫ್ಯೂಗೆ 6 ಗಂಟೆ ಇರುವಾಗ ಆದೇಶ ವಾಪಸ್ ಪಡೆಯೋ ಮೂಲಕ ಮತ್ತೊಮ್ಮೆ ನಗೆಪಾಟಲಿಗೀಡಾಗಿದೆ. ಬೆಳಗ್ಗೆಯಷ್ಟೇ ಸರ್ಕಾರ ನೈಟ್ ಕರ್ಫ್ಯೂ ಸಮರ್ಥಿಸಿಕೊಂಡಿತ್ತು. ನೈಟ್ ಕರ್ಫ್ಯೂ ಇದ್ದರೂ ಬಸ್, ಆಟೋ, ಟ್ಯಾಕ್ಸಿ ಎಲ್ಲವೂ ಇರೋ ಬಗ್ಗೆ ಜನ ಸಾಮಾನ್ಯರು, ವಿರೋಧಪಕ್ಷದವರು, ಸ್ವಪಕ್ಷದ ನಾಯಕರೂ ಸಹಿತ ಎಲ್ಲರೂ ಪ್ರಶ್ನಿಸಿದ್ದರು. ಈ ಹಿನ್ನಲೆಯಲ್ಲಿ ಸಂಜೆ 5 ಗಂಟೆ ಹೊತ್ತಿಗೆ ದಿಢೀರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದ ಸಿಎಂ ಯಡಿಯೂರಪ್ಪ, ನೈಟ್ ಕರ್ಫ್ಯೂ ಇಲ್ಲ ಅಂತ ಪ್ರಕಟಣೆ ಹೊರಡಿಸಿದ್ದಾರೆ.
Advertisement
ಬ್ರಿಟನ್ ಮುಂತಾದ ದೇಶಗಳಲ್ಲಿ ಪತ್ತೆಯಾದ ಕೋವಿಡ್ ರೂಪಾಂತರ ವೈರಾಣು ಹರಡುವಿಕೆ ನಿಯಂತ್ರಿಸಲು, ತಜ್ಞರ ಸಲಹೆಯಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಸಾರ್ವಜನಿಕ ವಲಯದ ಅಭಿಪ್ರಾಯಗಳನ್ನು ಪರಿಗಣಿಸಿ, ಸಚಿವರುಗಳ ಮತ್ತು ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. (1/3)
— CM of Karnataka (@CMofKarnataka) December 24, 2020
Advertisement
ನೈಟ್ ಕರ್ಫ್ಯೂ ವಾಪಸ್ಗೆ ಕಾರಣಗಳು..?
* ಕಾರಣ 1- ರಾತ್ರಿ 11ರ ನಂತರ ನೈಟ್ ಕರ್ಫ್ಯೂಗೆ ಜನರ ತೀವ್ರ ವಿರೋಧ
* ಕಾರಣ 2- ವಿಪಕ್ಷಗಳ ಜೊತೆ ಸ್ವಪಕ್ಷೀಯರಿಂದಲೂ ವ್ಯಕ್ತವಾದ ಟೀಕೆ
* ಕಾರಣ 3- ಆಟೋ, ಹೋಟೆಲ್, ಬಾರ್ ಮಾಲೀಕರಿಂದ ವ್ಯಕ್ತವಾದ ಪ್ರತಿರೋಧ
* ಕಾರಣ 4- ನೈಟ್ ಕರ್ಫ್ಯೂ ಉದ್ದೇಶ, ಪ್ರಯೋಜನ ವಿವರಿಸುವಲ್ಲಿ ವಿಫಲ
* ಕಾರಣ 5- ಮಾಧ್ಯಮಗಳು ಹೇರಿದ ಒತ್ತಡ