ನೈಲ್ ಆರ್ಟ್ ಕೂಡ ಒಂದು ಕಲೆ ಇದ್ದಂತೆ. ಸಾಮಾನ್ಯವಾಗಿ ಹುಡುಗಿಯರು ತಮ್ಮ ಉಡುಪು, ಮೇಕಪ್, ಜ್ಯೂವೆಲರಿಸ್, ಸ್ಲಿಪ್ಪರ್, ಹೇರ್ ಸ್ಟೈಲ್ ಬಗ್ಗೆ ಕಾಳಜಿ ವಹಿಸುವುದನ್ನು ನೊಡುತ್ತೇವೆ. ಆದರೆ ಎಷ್ಟೋ ಮಂದಿಗೆ ತಮ್ಮ ಕೈ ಬೆರಳ ಉಗುರನ್ನು ಸುಂದರಗೊಳಿಸುವುದು ಹೇಗೆ ಎಂದು ತಿಳಿಯದೇ ಚಿಂತಿಸುತ್ತಿರುತ್ತಾರೆ. ಕೇವಲ ಉಗುರನ್ನು ಸುಂದರಗೊಳಿಸಲು ದುಬಾರಿ ಮೊತ್ತ ನೀಡುವುದರ ಜೊತೆಗೆ ಬ್ಯೂಟಿ ಪಾರ್ಲರ್ಗಳಿಗೆ ಅಲೆದಾಡುತ್ತಾರೆ. ಅಂತಹವರಿಗೆ ಮನೆಯಲ್ಲಿಯೇ ಸುಲಭವಾಗಿ ತಮ್ಮ ಕೈ ಬೆರಳುಗಳ ಉಗುರನ್ನು ವಿನ್ಯಾಸಗೊಳಿಸಿ ಅದಕ್ಕೆ ತಕ್ಕ ಬಣ್ಣವನ್ನು ಹಚ್ಚುವುದರ ಕುರಿತ ಕೆಲವೊಂದು ಟಿಪ್ಸ್ ಗಳು ಇಲ್ಲಿದೆ.
Advertisement
ಆರ್ಟಿಸ್ಟಿಕ್ ಸ್ಟ್ರಿಪ್ಸ್
ನಿಮಗೆ ಇಷ್ಟವಾಗುವಂತಹ ಎರಡು ನೈಲ್ ಪಾಲಿಶ್ನನ್ನು ತೆಗೆದುಕೊಂಡು ಉದ್ದವಾಗಿ ಸಣ್ಣ ಸಣ್ಣ ಪಟ್ಟೆಯ ಮಾದರಿ ಉಗುರಿನ ಮೇಲೆ ಲೇಪಿಸಿ ಇದು ನೋಡಲು ಸುಂದರವಾಗಿ ಕಾಣಿಸುವುದರ ಜೊತೆಗೆ ಈ ಉಗುರಿನ ಅಂದವನ್ನು ಹೆಚ್ಚಿಸುತ್ತದೆ ಹಾಗೂ ನಿಮಗೆ ಬಹಳ ಖುಷಿಕೊಡುತ್ತದೆ.
Advertisement
Advertisement
ರಿಚ್ ಬ್ರಾವ್ನ್ (ಕಂದು ಬಣ್ಣ)
ಬ್ರಾವ್ನ್ ನೈಲ್ ಪಾಲಿಶ್ನನ್ನು ನೀವು ಕೇವಲ ಚಳಿಗಾಲದಲ್ಲಿ ಮಾತ್ರ ಹಚ್ಚಿಕೊಂಡರೆ ಚಂದ ಎಂದು ಭಾವಿಸಿದ್ದರೆ ಅದು ನಿಮ್ಮ ತಪ್ಪು ತಿಳುವಳಿಕೆ, ನೈಲ್ ಪಾಲಿಶ್ ಹಚ್ಚಿಕೊಳ್ಳಲು ನೀವು ಸೀಸನ್ಗಳಿಗಾಗಿ ಕಾಯಬೇಕಾಗಿಲ್ಲ. 3.1 ಫಿಲಿಮ್ ಲಿಮ್ ಬ್ರಾವ್ನ್(ಕಂದು) ಕಲರ್ ನೈಲ್ ಪಾಲಿಶ್, ನೀಲಿ ಬಣ್ಣದ ನೈಲ್ ಪಾಲಿಶ್ ಈ ಎಲ್ಲವೂ ತೀಷ್ಣವಾದ ಬಣ್ಣವಾಗಿದ್ದು, ಯಾವ ಸೀಸನ್ಗಳಲ್ಲಿ ಹಚ್ಚಿಕೊಂಡರು ಉತ್ತಮವಾಗಿ ಕಾಣುತ್ತದೆ.
Advertisement
ಕ್ರಿಮಿ ಹುಯಿಸ್( ಕೆನೆ ವರ್ಣ)
ಮಾಡೆಲ್ಗಳು ಹೆಚ್ಚಾಗಿ ಕಿತ್ತಳೆ ಮತ್ತು ಪಿಂಕ್ ಕಲರ್ ಕಾಂಬಿನೇಷನ್ ನೈಲ್ ಪಾಲಿಶ್ ಬಳಸುತ್ತಾರೆ. ಈ ಬಣ್ಣಗಳನ್ನು ಉಗುರಿಗೆ ಲೇಪಿಸಿದಾಗ ಇದು ನೋಡಲು ಕ್ರಿಮ್ ಕಲರ್ ಲುಕ್ ನೀಡುತ್ತದೆ. ಉಗುರಿನ ತುದಿ ಕಿತ್ತಳೆ ಬಣ್ಣ ಹಾಗೂ ಅದರ ಹಿಂದೆ ಪಿಂಕ್ ಕಲರ್ ಹಚ್ಚುವುದರಿಂದ ನಿಮ್ಮ ಉಗುರು ಸುಂದರವಾಗಿ ಹಾಗೂ ಕಾಂತಿಯುತವಾಗಿ ಗೋಚರಿಸುತ್ತದೆ.
ಅನಿಮಲ್ ಪ್ರಿಂಟ್
ಉಗುರಿನ ಮೇಲೆ ಯಾವುದಾದರೂ ಒಂದು ನೈಲ್ ಪಾಲಿಶ್ ಹಚ್ಚಿ ಅದರ ಮೇಲೆ ಮತ್ತೊಂದು ನೈಲ್ ಪಾಲಿಶ್ ಮೂಲಕ ಪ್ರಾಣಿಗಳ ಅಥವಾ ಮಿಡಿ ಸ್ಕರ್ಟ್ಗಳ ಮುದ್ರಣ ಮಾಡಿದರೆ ಅದು ನಿಮ್ಮ ಉಗುರಿಗೆ ಸೂಪರ್ ಬೋಲ್ಡ್ ಲುಕ್ ನೀಡುತ್ತದೆ.
ಪಲ್ಸ್ ಟಿಪ್ಸ್
ಸಾಮಾನ್ಯವಾಗಿ ಕೇಶ ವಿನ್ಯಾಸಕ್ಕಾಗಿ ಮುತ್ತುಗಳನ್ನು ಬಳಸಿರುವುದನ್ನು ನಾವು ಕಂಡಿರುತ್ತೇವೆ. ಆದರೆ ಮಾಡೆಲ್ ಒಬ್ಬರು ಉಗುರಿನ ಮೇಲೆ ಮುತ್ತುಗಳನ್ನು ನೈಲ್ ಪಾಲಿಶ್ನಂತೆ ವಿನ್ಯಾಸಗೊಳಿಸಿದ್ದಾರೆ. ಸಣ್ಣ ಸಣ್ಣ ಮುತ್ತುಗಳನ್ನು ಉಗುರಿನ ತುದಿಯಲ್ಲಿ ಅಂಟಿಸಿಕೊಳ್ಳುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ನೀವು ಕೂಡ ಮದುವೆ ಸಮಾರಂಭಗಳಿಗೆ ಹೋಗುವಾಗ ಈ ರೀತಿಯ ವಿಭಿನ್ನ ಶೈಲಿಯಲ್ಲಿ ಮುತ್ತುಗಳನ್ನು ಉಗುರಿನ ಬಣ್ಣದಂತೆ ಅಂಟಿಸಿಕೊಳ್ಳಲು ಟ್ರೈ ಮಾಡಿ ನೋಡಿ.