– ಇನ್ನೂ ಜೀವಂತವಾಗಿದೆ ವಿಚಿತ್ರ, ಭಯಾನಕ ಪದ್ಧತಿ
ಹಾವೇರಿ: ಮಗುವನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಟ್ಟು ನೀರು ಮುಟ್ಟಿಸಿ ಹರಕೆ ತೀರಿಸುವ ವಿಚಿತ್ರ ಹಾಗೂ ಅಪಾಯಕಾರಿ ಪದ್ಧತಿಯನ್ನು ದರ್ಗಾದಲ್ಲಿ ಅನುಸರಿಸಲಾಗುತ್ತಿದೆ.
Advertisement
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದ ಹಜರತ್ ಫೀರ್ ಸಯ್ಯದ್ ಅಲ್ಲಾವುದ್ದೀನ್ ಶಾ ಖಾದ್ರಿ ದರ್ಗಾದಲ್ಲಿ ಇಂಥದ್ದೊಂದು ಪದ್ಧತಿ ಜೀವಂತವಾಗಿದ್ದು, ಜನ ಮಗುವಿನ ಜೀವವನ್ನೂ ಲೆಕ್ಕಿಸದೆ ತೊಟ್ಟಿಲೊಳಗೆ ಮಲಗಿಸಿ ಕಟ್ಟಿ, ಬಾವಿಯಲ್ಲಿನ ನೀರು ಮುಟ್ಟಿಸುತ್ತಾರೆ.
Advertisement
ಎರಡು ದಿನಗಳ ಹಿಂದೆ ನಡೆದ ಘಟನೆಯ ದೃಶ್ಯಗಳು ಈಗ ವೈರಲ್ ಆಗಿವೆ. ಮಕ್ಕಳಾಗದವರು ದರ್ಗಾಕ್ಕೆ ಹರಕೆ ಹೊತ್ತು, ಮಕ್ಕಳಾದ ನಂತರ ಕೆಲವೇ ತಿಂಗಳ ಮಗುವನ್ನು ದರ್ಗಾಗೆ ಕರೆತಂದು ದರ್ಗಾದಲ್ಲಿರೋ ಬಾವಿಯ ನೀರು ಮುಟ್ಟಿಸುತ್ತಾರೆ. ಮಗುವನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಡುವಾಗ ಸ್ವಲ್ಪ ಯಾಮಾರಿದರೂ ನೀರಿಗೆ ಬೀಳುತ್ತದೆ. ಇಷ್ಟೆಲ್ಲ ತಿಳಿದಿದ್ದರೂ ಜನ ಈ ಮೂಢನಂಬಿಕೆಯ ಆಚರಣೆಯನ್ನು ಮಾಡುತ್ತಾರೆ.
Advertisement
Advertisement
ಹರಕೆ ತೀರಿಸುವ ನೆಪದಲ್ಲಿ ಈ ರೀತಿಯ ಅಪಾಯಕಾರಿ, ವಿಚಿತ್ರ ಪದ್ಧತಿಯನ್ನು ದರ್ಗಾದಲ್ಲಿ ಇನ್ನೂ ಆಚರಿಸಲಾಗುತ್ತಿದೆ. ಹಲವು ವರ್ಷಗಳಿಂದ ಈ ಪದ್ಧತಿ ದರ್ಗಾದಲ್ಲಿ ನಡೆದುಕೊಂಡು ಬಂದಿದ್ದರೂ ತಾಲೂಕು ಮತ್ತು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಈ ಘಟನೆ ಕುರಿತು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.