– ಜಮೀನಿಗೆ ಮೇವು ತರಲು ಹೋಗುತ್ತಿದ್ದ ಟ್ಯಾಕ್ಟರ್
ಹುಬ್ಬಳ್ಳಿ: ಜಮೀನಿಗೆ ತೆರಳುತ್ತಿದ್ದ ಟ್ರ್ಯಾಕ್ಟರ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ನಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ಮೂವರ ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದಿಂದ ನಡೆದಿದೆ.
Advertisement
Advertisement
ಮೃತ ಮಹಿಳೆ ರೇಣವ್ವ ಭೀಮಪ್ಪ ಪಾಟೀಲ್ ಆಗಿದ್ದಾರೆ. ಶಿಲ್ಪಾ, ಗೀತವ್ವ ಮತ್ತು ನಾರಾಯಣ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಬಸೂರ ಗ್ರಾಮದಿಂದ ಜಮೀನಿನಲ್ಲಿರುವ ಮೇವನ್ನ ಹೇರಿಕೊಂಡು ಬರಲು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
Advertisement
Advertisement
ನಸುಕಿನ ಜಾವ ಮಂಜು ದಟ್ಟವಾಗಿ ಹರಡಿದ ಪರಿಣಾಮ ಲಾರಿ ಚಾಲಕ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಘಟನೆಯ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.