ಮೈಸೂರು: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಮೈಸೂರಿನ ನಂಜನಗೂಡಿನಲ್ಲಿ ಮಾರ್ಚ್ 26 ರಂದು ನಡೆಯಬೇಕಿದ್ದ ನಂಜನಗೂಡಿನ ಶ್ರೀ ನಂಜುಡೇಶ್ವರನ ಮಹಾ ರಥೋತ್ಸವವನ್ನು ಮೈಸೂರಿನ ಜಿಲ್ಲಾಡಳಿತ ರದ್ದು ಮಾಡಿದೆ. ಆದರೆ ದಕ್ಷಿಣಕಾಶಿ ನಂಜನಗೂಡು ಜಾತ್ರೆಗೆ ಅನುಮತಿ ನೀಡುವಂತೆ ಇದೀಗ ಒತ್ತಡ ಹೆಚ್ಚಾಗಿದೆ.
Advertisement
ನಂಜನಗೂಡು ಜಾತ್ರೆ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಮೈಸೂರು ಜಿಲ್ಲಾಡಳಿತಕ್ಕೆ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಭಕ್ತರಿಂದ ನಂಜನಗೂಡು ಪಟ್ಟಣ ಬಂದ್ಗೆ ಕರೆ ನೀಡಲಾಗಿದೆ.
Advertisement
Advertisement
ಬಂದ್ ಮೂಲಕ ಸರ್ಕಾರದ ವಿರುದ್ಧ ನಂಜನಗೂಡಿನ ಜನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ರಾಜ್ಯದ ಗಮನ ಸೆಳೆಯಲು ಬಂದ್ ಮಾಡಲು ಭಕ್ತರು ಮುಂದಾಗಿದ್ದಾರೆ. ನಂಜನಗೂಡಿನಲ್ಲಿ ಅಂಗಡಿ ಬಂದ್ ಮಾಡಲು ಕರೆ ನೀಡಲಾಗಿದ್ದು, ನಂಜನಗೂಡು ಜಾತ್ರೆಗೆ ಅನುಮತಿ ಕೊಡುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ.