ನವದೆಹಲಿ: ರೈತರ ಹೋರಾಟ ಸ್ಥಳಗಳಾದ ದೆಹಲಿ ಗಡಿಗಳಲ್ಲಿ ಇಂದು ಸಂಜೆಯಿಂದ ಭಾರೀ ಹೈಡ್ರಾಮಾಗಳು ನಡೆಯುತ್ತಿವೆ. ಉದ್ವಿಗ್ನತೆ ಮನೆ ಮಾಡಿದೆ. ಯಾವಾಗ ಏನು ನಡೆಯುತ್ತೋ ಎಂಬ ಭಯ, ಆತಂಕ ಮನೆ ಮಾಡಿದೆ. ದೆಹಲಿ ಗಲಭೆ ಪ್ರಕರಣವನ್ನೇ ನೆಪ ಮಾಡಿಕೊಂಡು ಉತ್ತರ ಪ್ರದೇಶ ಸರ್ಕಾರ ರೈತ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ನಡೆಸಿದೆ.
Advertisement
ಘಾಜಿಪುರ ಗಡಿಯಲ್ಲಿ ಇದ್ದಕ್ಕಿದ್ದಂತೆ ಸಾವಿರಾರು ಶಸ್ತ್ರಸಜ್ಜಿತ ಪೊಲೀಸರು ಕಾಣಿಸಿಕೊಂಡಿದ್ದು, ಈ ಕೂಡಲೇ ಧರಣಿ ಅಂತ್ಯಗೊಳಿಸಿ ಜಾಗ ಖಾಲಿ ಮಾಡಿ ಒತ್ತಡ ಹಾಕಲಾಗ್ತಿದೆ. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುಮಾಡಿಕೊಡುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ರೈತರು ಬೀಡುಬಿಟ್ಟಿರುವ ಘಾಜಿಪುರ ಗಡಿ ಪ್ರದೇಶದಲ್ಲಿ ವಿದ್ಯುತ್, ನೀರಿನ ಸಂಪರ್ಕವನ್ನು ಘಾಜಿಯಾಬಾದ್ ಜಿಲ್ಲಾಡಳಿತ ಕಡಿತ ಮಾಡಿದೆ.
Advertisement
Advertisement
ರೈತ ಹೋರಾಟದ ಮುಂದಾಳು ರಾಕೇಶ್ ಟಿಕಾಯತ್ ಮಾತ್ರ, ಯಾವುದೇ ಕಾರಣಕ್ಕೂ ನಾವಿಲ್ಲಿಂದ ಕದಲಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಗುಂಡು ಹೊಡೀತೀರಾ ಹೊಡೀರಿ ಎಂದು ಎಂದು ನೇರ ಸವಾಲು ಹಾಕಿದ್ದಾರೆ. ನಮ್ಮನ್ನು ಏನಾದ್ರೂ ಮುಟ್ಟಿದ್ರೆ,. ಅರೆಸ್ಟ್ ಮಾಡಿದ್ರೆ, ನಮಗೆ ನಾವೇ ಪ್ರಾಣಗಳನ್ನು ಅರ್ಪಿಸಿಕೊಳ್ಳಲು ಸಿದ್ಧ ಎಂದು ಘೋಷಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗೆ ಅಡ್ಡಿಯಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಘಾಜಿಪುರದಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿಲ್ಲ. ಹೀಗಾಗಿದ್ದು ನಮ್ಮನ್ನು ಒಕ್ಕಲೆಬ್ಬಿಸಲು ಹೊರಟಿರೋದು ಸರಿಯಲ್ಲ ಎಂದು ರಾಕೇಶ್ ಟಿಕಾಯತ್ ಗುಡುಗಿದ್ದಾರೆ.
Advertisement
BKU leader Naresh Tikait's brother Rakesh says he will continue the sit-in protest at the Ghazipur border. https://t.co/YfFImmwjDy
— ANI UP/Uttarakhand (@ANINewsUP) January 28, 2021
ಘಾಜಿಯಾಬಾದ್ ಜಿಲ್ಲಾಡಳಿತ ಮಾತ್ರ, ನೀವು ಸಾರ್ವಜನಿಕ ರಸ್ತೆಯಲ್ಲಿ ತೊಂದರೆ ಉಂಟು ಮಾಡುತ್ತಿರೋದನ್ನ ಸಹಿಸಲು ಸಾಧ್ಯವೇ ಇಲ್ಲ. ಈ ರಾತ್ರಿಯೊಳಗೆ ನೀವು ಖಾಲಿ ಮಾಡಲೇಬೇಕು. ಇಲ್ಲದಿದ್ರೆ ಬಲ ಪ್ರಯೋಗ ಮಾಡಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ.
Uttar Pradesh government has ordered all DMs and SSPs to ensure the end of all the farmers' agitations in the state: Government officials pic.twitter.com/Pa9dVerZgZ
— ANI UP/Uttarakhand (@ANINewsUP) January 28, 2021
ಸ್ಥಳದಲ್ಲಿ ಸಿಐಎಸ್ಎಫ್, ಸಿಆರ್ ಪಿಎಫ್, ಆರ್ಎಎಫ್ ಪಡೆಗಳನ್ನು ದೊಡ್ಡಮಟ್ಟದಲ್ಲಿ ನಿಯೋಜಿಸಲಾಗಿದೆ. 144 ಸೆಕ್ಷನ್ ಜಾರಿ ಮಾಡಲಾಗಿದೆ. ಡಿಸಿ, ಎಸ್ಪಿ, ಡಿಸಿಪಿಗಳು ಬೀಡುಬಿಟ್ಟಿದ್ದಾರೆ. ಇಂದು ರಾತ್ರಿಯೊಳಗೆ ರೈತರನ್ನು ಖಾಲಿ ಮಾಡಿಸುವಂತೆ ಉತ್ತರ ಪ್ರದೇಶ ಸರ್ಕಾರ, ಘಾಜಿಯಾಬಾದ್ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಇನ್ನು ಸಿಂಘು, ಟಿಕ್ರಿ ಗಡಿಯಲ್ಲಿಯೂ ಹೆಚ್ಚು ಕಡಿಮೆ ಇದೇ ರೀತಿಯ ಪರಿಸ್ಥಿತಿ ಕಂಡು ಬರುತ್ತಿದೆ. ಎಲ್ಲಾ ಕಡೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ದೆಹಲಿ ಗಡಿಗಳೆಲ್ಲಾ ಮೂರು ಸುತ್ತಿನ ಪೊಲೀಸ್ ಕೋಟೆಗಳಾಗಿ ಬದಲಾಗಿವೆ.
Uttar Pradesh Police personnel conduct a flag march at the Ghazipur border
Visuals from the border area pic.twitter.com/NzLqWyFawI
— ANI UP/Uttarakhand (@ANINewsUP) January 28, 2021