ಬೆಂಗಳೂರು: ಕೊರೊನಾ ಮಧ್ಯೆ ಬೆಂಗಳೂರು ಜನರಿಗೆ ತೆರಿಗೆ ಶಾಕ್ ಕಾದಿದೆ. ಬಿಬಿಎಂಪಿ ಆದಾಯ ಹೆಚ್ಚಿಸಲು ಮುಂದಾಗಿರುವ ಪಾಲಿಕೆ ಜನಸಾಮಾನ್ಯರಿಗೆ ಹೊರೆಮಾಡಲಿದೆ.
ಆಸ್ತಿ ತೆರಿಗೆ, ಪ್ಲಾನ್ ಅಪ್ರೂವಲ್, ಖಾತಾ ಹಂಚಿಕೆ ದರ ಏರಿಕೆ ಜೊತೆಗೆ ಭೂ ಸಾರಿಗೆ ಸೆಸ್ ಜಾರಿಗೆ ತರಲು ಬಿಬಿಎಂಪಿ ತೀರ್ಮಾನ ಮಾಡಿದೆ. ಆಸ್ತಿ ತೆರಿಗೆ ಶೇ.15 ರಿಂದ 25ರಷ್ಟು ಹೆಚ್ಚಳ, ಖಾತಾ ಚಾರ್ಜ್ ಶೇ.2 ರಿಂದ 5 ರಷ್ಟು ಏರಿಕೆ ಸಾಧ್ಯತೆ ಇದೆ.
Advertisement
Advertisement
ಆಸ್ತಿ ನೋಂದಣಿ ಮಾಡುವಾಗ ನೋಂದಣಿ ಶುಲ್ಕದ ಆಧಾರದ ಮೇಲೆ ಖಾತಾ ಶುಲ್ಕ ಹೆಚ್ಚಳಕ್ಕೆ ಬಿಬಿಎಂಪಿ ನಿರ್ಧರಿಸಿದೆ. ಗಾರ್ಬೆಜ್ ಸೆಸ್, ರೋಡ್ ಕಟಿಂಗ್ ಚಾರ್ಜ್ಸ್ ಕೂಡ ಹೆಚ್ಚಳ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
Advertisement
2016 ರಿಂದ ಆಸ್ತಿ ತೆರಿಗೆ ಹೆಚ್ಚಳವಾಗಿಲ್ಲ. ಬಿಬಿಎಂಪಿಯಲ್ಲಿ ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಡಿಕರಣಕ್ಕೆ ತೆರಿಗೆ ಹೊರೆ ಏರಲು ಪ್ಲಾನ್ ಮಾಡಿಕೊಂಡಿದ್ದು, ಬಿಬಿಎಂಪಿ ಕಮೀಷನರ್ ಹಾಗೂ ಆಡಳಿತಾಗಾರರಿಂದ ಒಂದು ಸುತ್ತಿನ ಸಭೆಯಲ್ಲಿ ಚರ್ಚೆ ಮಾಡಿದ್ದಾರೆ.
Advertisement