ಹುಬ್ಬಳ್ಳಿ: ಜೆ.ಎಸ್.ಡಬ್ಲೂ ಸ್ಟೀಲ್ ಹಾಗೂ ಹುಬ್ಬಳ್ಳಿಯ ಕಮಲ್ ಟ್ರೇಡಿಂಗ್ ಕಾರ್ಪೋರೇಷನ್ ವತಿಯಿಂದ ಆರಂಭಿಸಲಾಗಿರುವ ತುರ್ತು ಅಂಬುಲೆನ್ಸ್ ಸೇವೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜ್ಗೆ ಧಕ್ಕೆ ಬರಲಿದೆ: ಶೆಟ್ಟರ್
ಇಂದು ಹುಬ್ಬಳ್ಳಿಯಲ್ಲಿ ಜೆ.ಎಸ್.ಡಬ್ಲೂ ಸ್ಟೀಲ್ ಹಾಗೂ ಹುಬ್ಬಳ್ಳಿಯ ಕಮಲ್ ಟ್ರೇಡಿಂಗ್ ಕಾರ್ಪೋರೇಷನ್ ವತಿಯಿಂದ ಆರಂಭಿಸಲಾಗಿರುವ ತುರ್ತು ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.#ಹುಬ್ಬಳ್ಳಿ | #ಧಾರವಾಡ | #Hubli | #Dharwad | #KarnatakaFightsCorona | #MaskUpKarnataka pic.twitter.com/YKEYGfO7vD
— Jagadish Shettar (@JagadishShettar) June 7, 2021
Advertisement
ಮಧುರಾ ಕಾಲೋನಿಯ ಗೃಹ ಕಚೇರಿ ಬಳಿ ತುರ್ತು ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ. ಹುಬ್ಬಳ್ಳಿ ಸುತ್ತಮತ್ತಲಿನ 30 ರಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ ಆಂಬ್ಯಲೆನ್ಸ್ ಸೇವೆ ಕರ್ತವ್ಯ ನಿರ್ವಹಿಸುವುದು. ಧಾರವಾಡ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿರುವ ಸಂಸ್ಥೆ ಅಗತ್ಯವಿರುವ ಸಾರ್ವಜನಿಕರಿಗೂ ಅಂಬುಲೆನ್ಸ್ ಸೇವೆ ಒದಗಿಸಲಿದೆ. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಉಚಿತ ಅಂಬುಲೆನ್ಸ್ ಸೇವೆ ಲಭ್ಯವಿರುವುದು. ಸಾರ್ವಜನಿಜರು ಆಪತ್ಕಾಲದಲ್ಲಿ ಮೊಬೈಲ್ ಸಂಖ್ಯೆಗಳಾದ 9742420611, 8496083312 ಹಾಗೂ 9988058136 ಕರೆ ಮಾಡಬಹದು. ಇದನ್ನೂ ಓದಿ: ಇಂದು ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ- ಕುಟುಂಬಸ್ಥರಿಂದ ಪೂಜೆ
Advertisement
ಇಂದು ಹುಬ್ಬಳ್ಳಿಯಲ್ಲಿ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಪೋಲಿಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಸಭೆ ಸೇರಿ, ಲಾಕ್ ಡೌನ್ ವಿಸ್ತರಿಸುವ ಕುರಿತು ಸಮಗ್ರವಾಗಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. pic.twitter.com/oiM1616WnF
— Jagadish Shettar (@JagadishShettar) May 23, 2021
Advertisement
ಅಂಬುಲೆನ್ಸ್ ಚಾಲನೆ ನೀಡುವ ಸಂದರ್ಭದಲ್ಲಿ ಮಹೇಂದ್ರ ವಿಜಯ್ವರ್ಗೀಯ, ಶ್ರೀನಿವಾಸ ಕುಲಕರ್ಣಿ, ಕಮಲ್ ಕೆ ಮೆಹ್ತಾ, ಅಮೋಲ್ ಎಂ ಮೆಹ್ತಾ, ರೋಹನ್ ಮೆಹ್ತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.