ತುಮಕೂರು: ಇಂದು ರಾಜ್ಯಾದ್ಯಂತ ಕಾಲೇಜುಗಳು ಆರಂಭವಾಗ್ತಿದೆ. ಆದರೆ ತುಮಕೂರಲ್ಲಿ ಮಾತ್ರ ಖಾಸಗಿ ಕಾಲೇಜುಗಳು ಓಪನ್ ಆಗೋದೇ ಡೌಟ್ ಆಗಿದೆ.
ಸರ್ಕಾರದ ನಿರ್ಧಾರಕ್ಕೆ ಖಾಸಗಿ ಕಾಲೇಜು ಆರಂಭಕ್ಕೆ ಜಿಲ್ಲಾ ಅನುದಾನ ರಹಿತ ಶಾಲಾ ಕಾಲೇಜು ಮಂಡಳಿಗಳ ಒಕ್ಕೂಟ ಆಕ್ಷೇಪಿಸಿದೆ. ಸರ್ಕಾರ ದಿಢೀರ್, ಅಪಾಯಕಾರಿ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರ ಕೇವಲ ಹೇಳಿಕೆ ನೀಡಿದ್ದು ಕಾಲೇಜು ಆರಂಭದ ಸಂಬಂಧ ವಹಿಸಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸ್ಪಷ್ಟ ನಿಲುವು ಹೇಳಿಲ್ಲ ಎಂದು ತಿಳಿಸಿದೆ.
Advertisement
Advertisement
ಒಂದು ವಾರ ಮುಂಚಿತವಾಗಿ ಗೈಡ್ ಲೈನ್ ಹೇಳಬೇಕಿತ್ತು. ಈವರೆಗೂ ವಿವಿಗಳಿಂದ ಅಧಿಕೃತ ಆದೇಶ ಪತ್ರಗಳು ಬಂದಿಲ್ಲ. ಹೀಗಾಗಿ ಖಾಸಗಿ ಕಾಲೇಜುಗಳ ಓಪನ್ ಆಗಲ್ಲವೆಂದು ತುಮಕೂರು ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳ ಅಧ್ಯಕ್ಷ ಪಬ್ಲಿಕ್ ಟಿವಿಗೆ ಹಾಲನೂರು ಲೇಪಾಕ್ಷಿ ಸ್ಪಷ್ಟಪಡಿಸಿದ್ದಾರೆ.