ಭುವನೇಶ್ವರ: ತುಂಬು ಗರ್ಭಿಣಿಯನ್ನು ಉರಿಬಿಸಿಲಿನಲ್ಲಿ ಸುಮಾರು 3 ಕಿ.ಮೀ ನಡೆಸಿದ ಮಹಿಳಾ ಇನ್ಸ್ ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.
ಈ ಅಮಾನವೀಯ ಘಟನೆ ಭುವನೇಶ್ವರದ ಮಯೂರ್ ಭಂಜ್ ನಲ್ಲಿ ನಡೆದಿದೆ. ಮಹಿಳಾ ಇನ್ಸ್ ಪೆಕ್ಟರ್ ಅಮಾನವೀಯ ವರ್ತನೆಗೆ ಪೊಲೀಸ್ ಇಲಾಖೆ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ರೀನಾ ಬಕ್ಸಲ್ ರನ್ನು ಕೆಲಸದಿಂದ ವಜಾ ಮಾಡಲಾಗಿದೆ.
Advertisement
Advertisement
ಆಗಿದ್ದೇನು..?
8 ತಿಂಗಳ ತುಂಬು ಗರ್ಭಿಣಿ ತನ್ನ ಪತಿ ವಿಕ್ರಮ್ ಜೊತೆ ಬೈಕ್ ನಲ್ಲಿ ಕುಳಿತು ಆಸ್ಪತ್ರೆಗೆ ತೆರಳುತ್ತಿದ್ದರು. ಹಿಂಬದಿ ಕುಳಿತಿದ್ದ ಗರ್ಭಿಣಿ ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ರೀನಾ, ಬೈಕ್ ತಡೆದು ನಿಲ್ಲಿಸಿದ್ದಾರೆ. ಇತ್ತ ದಂಡ ಪಾವತಿಸುವಂತೆ ಇನ್ಸ್ ಪೆಕ್ಟರ್ ರೀನಾ ತಿಳಿಸಿದ್ದಾರೆ. ಆಗ ವಿಕ್ರಮ್, ನನ್ನ ಬಳಿ ಹಣವಿಲ್ಲ. ಹೀಗಾಗಿ ಹಣವನ್ನು ಆನ್ ಲೈನ್ ಮೂಲಕ ಪಾವತಿಸುವುದಾಗಿ ಹೇಳಿದ್ದಾರೆ. ಆದರೆ ರೀನಾ ಇದಕ್ಕೊಪ್ಪಲಿಲ್ಲ. ಈ ವೇಳೆ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ.
Advertisement
Advertisement
ಕೊನೆಗೆ ಪೊಲೀಸ್ ಠಾಣೆಗೆ ಬಂದು ದಂಡ ಪಾವತಿಸುವಂತೆ ರೀನಾ, ವಿಕ್ರಮ್ ಗೆ ಸೂಚಿಸಿದ್ದಾರೆ. ಅಂತೆಯೇ ಠಾಣೆಗೆ ಪತ್ನಿಯನ್ನು ಕರೆದುಕೊಂಡು ಹೋಗುವುದಾಗಿ ವಿಕ್ರಮ್, ರೀನಾ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ರೀನಾ, ವಿಕ್ರಮ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಜೈಲಿನೊಳಗೆ ಸುಮಾರು 3 ಗಂಟೆಗಳ ಕಾಲ ಕೂಡಿಹಾಕಿದ್ದಾರೆ. ಇತ್ತ ತುಂಬು ಗರ್ಭಿಣಿ ಪತಿಗಾಗಿ ಕೆಲವು ಗಂಟೆಗಳ ಕಾಲ ರಸ್ತೆ ಬದಿಯೇ ಕಾದು ನಿಂತಿದ್ದಾರೆ. ಸುಮಾರು ಹೊತ್ತಾದರೂ ಪತಿ ಬರದೇ ಇರುವುದರಿಂದ ಅವರು ಮೂರು ಕಿ.ಮೀ ನಡೆದುಕೊಂಡೇ ಠಾಣೆಗೆ ಬಂದಿದ್ದಾರೆ.
ಬಳಿಕ ದಂಪತಿ ಪೊಲೀಸ್ ಅಧಿಕಾರಿ ಬಳಿ ನಡೆದ ಘಟನೆಯನ್ನು ವಿವಿರಿಸಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಎಸ್ಪಿ ಪಾರ್ಮರ್ ಸ್ಮಿತ್ ಪುರುಷೋತ್ತಮದಾಸ್ ರೀನಾ ಅವರನ್ನು ಕೆಲಸದಿಂದ ವಜಾ ಮಾಡಿದ್ದಾರೆ.