– ಮೂವರು ಅರ್ಚಕರು ಹತ್ಯೆಯಾಗಿದ್ದ ದೇಗುಲ
ಮಂಡ್ಯ: ನಗರದ ಅರ್ಕೇಶ್ವರ ದೇಗುಲ ಒಂದು ತಿಂಗಳು ಬಳಿಕ ತೆರೆದಿದೆ. ದೇವಸ್ಥಾನದಲ್ಲಿ ಮಲಗಿದ್ದ ಮೂವರು ಅರ್ಚಕರನ್ನು ಹತ್ಯೆಗೈಯಲಾಗಿದ್ದರಿಂದ ದೇಗುಲ ಪ್ರವೇಶಕ್ಕೆ ಭಕ್ತರ ನಿಷೇಧ ಹಾಕಲಾಗಿತ್ತು.
ಸೆ.10 ಮಧ್ಯ ರಾತ್ರಿ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಮೂವರು ಅರ್ಚಕರ ಬರ್ಬರ ಹತ್ಯೆಗೆ ರಾಜ್ಯದಲ್ಲಿನ ಮುಜರಾಯಿ ಇಲಾಖೆಯ ದೇವಸ್ಥಾನಗಳ ಅರ್ಚಕರು ಸೇರಿಂದಂತೆ ಎಲ್ಲಾ ಸಿಬ್ಬಂದಿ ಬೆಚ್ಚಿಬಿದ್ದಿದ್ರು. ದೇವಸ್ಥಾನದ ಹುಂಡಿಯನ್ನು ಕಳವು ಮಾಡುವ ಉದ್ದೇಶದಿಂದ ದೇವಸ್ಥಾನದಲ್ಲಿ ಮಲಗಿದ್ದ ಆನಂದ್, ಗಣೇಶ್, ಪ್ರಕಾಶ್ ಎಂಬ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ರು. ಬಳಿಕ ಈ ಕೃತ್ಯದಲ್ಲಿ ಪಾಲ್ಗೊಂಡಿದ್ದ 9 ಮಂದಿ ಹಂತಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದರು. ಇದನ್ನೂ ಓದಿ: ಮಂಡ್ಯದ ಅರ್ಕೇಶ್ವರ ದೇವಾಲಯದ ಮೂವರು ಅರ್ಚಕರ ಬರ್ಬರ ಹತ್ಯೆ
Advertisement
Advertisement
ಇದೀಗ ಇಂದಿನಿಂದ ಅರ್ಕೇಶ್ವರಸ್ವಾಮಿ ದೇಗುಲ ತೆರೆದಿದ್ದು, ದೇವರಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದರ ಜೊತೆಗೆ ಭಕ್ತರಿಗೂ ದರ್ಶನದ ಅವಕಾಶ ಮಾಡಿಕೊಡಲಾಗಿದೆ. ದೇವಸ್ಥಾನದ ಆರಂಭಕ್ಕೂ ಮುನ್ನ, ಶವಗಳಿದ್ದ ಸ್ಥಳವನ್ನು ನಾಲ್ಕು ಅಡಿಗಳಷ್ಟು ಜಾಗವನ್ನು ಅಗೆದು ಆ ಜಾಗದಲ್ಲಿ ವಿವಿಧ ಪೂಜೆ ಹಾಗೂ ಹೋಮಗಳನ್ನು ಮಾಡಲಾಗಿದೆ. ನಂತರ ದೇವಸ್ಥಾನದ ಬಾಗಿಲು ತೆರೆದು ದೇವಸ್ಥಾನವನ್ನು ಶುದ್ಧಿಗೊಳಿಸಿ ಪೂಜೆ ಸಲ್ಲಿಸಲಾಗಿದೆ. ಇದನ್ನೂ ಓದಿ: ಅರ್ಚಕರ ಹತ್ಯೆ ಪ್ರಕರಣ – ಆರೋಪಿಗಳಿಗೆ ನ್ಯಾಯಾಂಗ ಬಂಧನ
Advertisement
Advertisement
ಒಂದು ಕಡೆ ತಮ್ಮ ಮನೆಯವರನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು ಇನ್ನು ನಿಂತಿಲ್ಲ. ಇನ್ನೊಂದು ಕಡೆ ಭಗವಂತನಿಗೆ ತಟ್ಟಿದ ಸೂತಕವನ್ನು ನಿವಾರಣೆ ಮಾಡಿ ಭಕ್ತರಿಗೆ ಭಗವಂತನ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಇದನ್ನೂ ಓದಿ: ಅರ್ಚಕರನ್ನು ಕೊಂದ ಮೂವರು ಹಂತಕರ ಮೇಲೆ ಪೊಲೀಸರಿಂದ ಶೂಟ್ಔಟ್