– ತಾಯಿ ವಿಪರೀತ ನೋವು ಅನುಭವಿಸುತ್ತಿದ್ದರಿಂದ ಕೊಲೆ
ಚೆನ್ನೈ: ರೋಗ ಹಾಗೂ ನೋವಿನಿಂದ ಬಳಲುತ್ತಿದನ್ನು ನೋಡಲಾಗದೆ ಹಾಸಿಗೆ ಹಿಡಿದಿದ್ದ ತಾಯಿಯನ್ನು ಮಗನೇ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರುಂಬುದೂರ್ನಲ್ಲಿ ಘಟನೆ ನಡೆದಿದ್ದು, 36 ವರ್ಷದ ಮಗ ಆನಂದನ್ 66 ವರ್ಷದ ತನ್ನ ತಾಯಿ ಗೋವಿಂದಮ್ಮಳ್ ನ್ನು ಕೊಲೆ ಮಾಡಿದ್ದಾನೆ. ತಾಯಿ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಳು. ಅಲ್ಲದೆ ಹಾಸಿಗೆ ಹಿಡಿದಿದ್ದಳು ಆಕೆಯ ಕಷ್ಟವನ್ನು ನೋಡಲಾಗದೆ ಕೊಲೆ ಮಾಡಿದೆ ಎಂದು ಮಗ ಹೇಳಿದ್ದಾನೆ.
Advertisement
Advertisement
ಸಂತ್ರಸ್ತೆ ಗೋವಿಂದಮ್ಮಳ್ ಪತಿ ಹಾಗೂ ಮಗನೊಂದಿಗೆ ವಾಸವಿದ್ದಳು. ಆದರೆ ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು ಆಕೆಯ ನೋವನ್ನು ನೋಡಲಾಗದೆ ಮಗ ತಾಯಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
Advertisement
ಫೆಬ್ರವರಿಯಲ್ಲಿ ಸಂತ್ರಸ್ತೆಗೆ ಕ್ಷಯ ರೋಗ ಹಾಗೂ ಮಧುಮೇಹ ಇರುವುದು ಪತ್ತೆಯಾಗಿದೆ. ಜುಲೈ ಮೊದಲ ವಾರದಲ್ಲಿ ಸಂತ್ರಸ್ತೆಗೆ ಶ್ರೀಪೆರುಂಬುದೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮನೆಗೆ ಕರೆ ತರಲಾಗಿದೆ. ಸಂತ್ರಸ್ತೆಯ ಕುಟುಂಬದವರು ಮರಿಯಮ್ಮನ ಕೊಲ್ಲಿ ಸ್ಟ್ರೀಟ್ನಲ್ಲಿ ಧೋಬಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
ಜುಲೈ 24ರಂದು ವೃದ್ಧೆ ತನ್ನ ಮಗನ ಬಳಿ ತನ್ನನ್ನು ಕೊಲೆ ಮಾಡುವಂತೆ ಪದೇ ಪದೇ ಕೇಳಿಕೊಂಡಿದ್ದಾಳೆ. ಈ ವೇಳೆ ಅವಳಿಗೆ ತುಂಬಾ ನೋವು ಕಾಡಿದೆ. ಅಲ್ಲದೆ ಯಾವುದೇ ಚಿಕಿತ್ಸೆ ನನ್ನನ್ನು ಗುಣಪಡಿಸಲು ಸಾಧ್ಯವಿಲ್ಲ. ಹೀಗಾಗಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಬೇಡಿ ಎಂದು ಹೇಳಿದ್ದಾಳೆ.
ಸೋಮವಾರ ವೃದ್ಧೆಯ ಪತಿ ಕೆಲಸದಿಂದ ಮನೆಗೆ ಆಗಮಿಸಿದ್ದು, ಈ ವೇಳೆ ತನ್ನ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾನೆ. ಅಲ್ಲದೆ ಕುತ್ತಿಗೆ ಸೀಳಿದ್ದನ್ನು ನೋಡಿದ್ದಾನೆ. ಸಂತ್ರಸ್ತೆಯ ಮಗಳು ಪಕ್ಕದ ಮನೆಗೆ ತೆರಳಿದಾಗ ಈ ಘಟನೆ ನಡೆದಿದೆ. ಘಟನೆ ಬಳಿಕ ವೃದ್ಧೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಪೊಲೀಸರು ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಆನಂದನ್ ತಪ್ಪನ್ನು ಒಪ್ಪಿಕೊಂಡಿದ್ದು, ತಾಯಿ ಸಹಿಸಲಾಗದ ನೋವು ಅನುಭವಿಸುತ್ತಿದ್ದರಿಂದ ನಾನೇ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.
ವೃದ್ಧೆಯವರದ್ದು ತುಂಬಾ ಬಡ ಕುಟುಂಬವಾಗಿದ್ದು, ಬಟ್ಟೆ ತೊಳೆಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಅಲ್ಲದೆ ಲಾಕ್ಡೌನ್ನಿಂದಾಗಿ ಇವರ ಕೆಲಸದ ಮೇಲೆ ಭಾರೀ ಪರಿಣಾಮ ಬೀರಿತ್ತು. ಹೀಗಾಗಿ ವೃದ್ಧೆಯ ವೈದ್ಯಕೀಯ ವೆಚ್ಚಕ್ಕೆ ಅಷ್ಟು ಹಣ ಖರ್ಚು ಮಾಡಲು ಸಾಧ್ಯವಿರಲಿಲ್ಲ ಎಂದು ಶ್ರೀಪೆರುಂಬುಂದೂರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜೆ.ವಿನಯಗಮ್ ಹೇಳಿದ್ದಾರೆ.
ಆರೋಪಿ ಮನೆಯಲ್ಲಿ ತರಕಾರಿ ಕತ್ತರಿಸಲು ಬಳಸುವ ಚಾಕುವಿನಿಂದಲೇ ಕತ್ತು ಸೀಳಿ ತಾಯಿಯ ಕೊಲೆ ಮಾಡಿದ್ದಾನೆ. ಪೊಲೀಸರು ಆನಂದನ್ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.