ರಾಯಚೂರು: ತಾಯಿಯ ಸಾವಿನ ದುಃಖದ ಮಧ್ಯೆಯೂ ಹೆತ್ತಮ್ಮನ ಆಸೆಯಂತೆ ಪದವಿ ಪರೀಕ್ಷೆಗೆ ಯುವತಿ ಹಾಜರಾದ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಘಡದಲ್ಲಿ ನಡೆದಿದೆ.
ಮಗಳು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಅಂತ ಕಷ್ಟಪಡುತ್ತಿದ್ದ ತಾಯಿ, ಮಗಳ ಪರೀಕ್ಷೆಯ ಹಿಂದಿನ ದಿನವೇ ಸಾವನ್ನಪ್ಪಿದ್ದಾರೆ. ಯಾವುದೇ ಕಾರಣಕ್ಕೂ ಓದು ನಿಲ್ಲಬಾರದು ಎಂದು ಹೇಳುತ್ತಿದ್ದ ತಾಯಿ ಮಾತಿಗೆ ಬೆಲೆಕೊಟ್ಟು ಯುವತಿ ಬಸಲಿಂಗಮ್ಮ ಪೂಜಾರ ತನ್ನ ಪರೀಕ್ಷೆಯನ್ನು ಬರೆದು ಬಂದು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.
Advertisement
Advertisement
ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ ಚನ್ನಮ್ಮ ಉಪವಾಸ ವೃತದ ಮಧ್ಯೆಯೂ ಹೊಲದ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಏಕಾಏಕೀ ರಕ್ತದೊತ್ತಡ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ತಾಯಿಯ ಸಾವಿನ ಮಧ್ಯೆಯೂ ಅಮೀನಗಢದಿಂದ ಲಿಂಗಸುಗೂರಿಗೆ ಬಂದು ಪದವಿ ಮೂರನೇ ಸೆಮಿಸ್ಟರ್ ಪರೀಕ್ಷೆಯನ್ನು ಯುವತಿ ಬಸಲಿಂಗಮ್ಮ ಪೂಜಾರ ಬರೆದಿದ್ದಾರೆ. ಹೆಣ್ಣು ಮಕ್ಕಳು ಚೆನ್ನಾಗಿ ಓದಬೇಕು ಎನ್ನುವ ಮಾತುಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರ ಲಸಿಕೆ ಪಡೆದರೆ ಅಡ್ಡಪರಿಣಾಮವಿಲ್ಲ: ಐಸಿಎಂಆರ್
Advertisement