ಹಾವೇರಿ: ಹಾವೇರಿಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಚರಂಡಿ ನೀರಿಗೆ ಸಂಪರ್ಕ ಕಲ್ಪಿಸೋ ಪೈಪ್ನಲ್ಲಿ ಮೂರು ನಾಯಿ ಮರಿಗಳು ಸಿಕ್ಕು ಒದ್ದಾಡ್ತಿದ್ದ ಮರಿಗಳನ್ನ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹಾವೇರಿ ನಗರದ ಹರ್ಷಾವರ್ಷಾ ಕಾಂಪ್ಲೆಕ್ಸ್ ನ ನೆಲಮಹಡಿಯ ಪೈಪ್ ನಲ್ಲಿ ಸಿಕ್ಕು ಒದ್ದಾಡುತ್ತಿದ್ದವು.
Advertisement
ಬೀದಿ ನಾಯಿ ಕೆಲವು ದಿನಗಳ ಹಿಂದೆ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಮಳೆ ನೀರು ಕಾಂಪ್ಲೆಕ್ಸ್ ಗೆ ನುಗ್ಗಿದ್ದರಿಂದ ಪೈಪ್ನಲ್ಲಿ ನೀರು ತುಂಬಿಕೊಂಡಿತು. ಮರಿಗಳು ಸಹ ನೀರಲ್ಲಿ ಸಿಕ್ಕು ಒದ್ದಾಡ್ತಿದ್ದು ಕಂಡು ತಾಯಿ ಚೀರಾಡುತ್ತಿತ್ತು. ನಾಯಿಯ ಚೀರಾಟ ಕಂಡು ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಮೂರು ಮರಿಗಳನ್ನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬದುಕಿದೆಯಾ ಬಡಜೀವವೆ ಅಂತಾ ಮೂರು ಮರಿಗಳು ತಾಯಿ ಮಡಿಲು ಸೇರಿದವು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದರು.