– ಗುಪ್ತಾಂಗ, ಮುಖದ ಮೇಲೆ ಕತ್ತಿಯಿಂದ ದಾಳಿ
ಭೋಪಾಲ್: ಪತಿ-ಪತ್ನಿ ಸಂಬಂಧ ಜನುಮ ಜನುಮದ್ದು ಅಂತ ಹೇಳ್ತಾರೆ. ಆದ್ರೆ ತವರಿಗೆ ಹೋಗ್ತೀನಿ ಅಂದಿದ್ದ ಪತ್ನಿಯ ಮೂಗನ್ನ ಪತಿ ಕತ್ತರಿಸಿರುವ ವಿಚಿತ್ರ ಭಯಾನಕ ಘಟನೆ ನಡೆದಿದೆ. ಮಧ್ಯ ಪ್ರದೇಶದ ಆಗರಾ ಮಲ್ವಾ ಜಿಲ್ಲೆಯ ವಿದ್ಯಾನಗರ ಬಿರಲಗ್ರಾಮದಲ್ಲಿ ನಡೆದಿದೆ.
Advertisement
ಪತ್ನಿ ಕೆಲ ದಿನ ತವರಿಗೆ ಹೋಗ್ತೀನಿ ಅಂತ ಹೇಳಿದ್ದಳು. ಇದೇ ವಿಷಯವಾಗಿ ಪತಿ ಮತ್ತು ಪತ್ನಿ ಜಗಳ ನಡೆದಿದ್ದಾನೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಪತಿ ಮನೆಯಲ್ಲಿದ್ದ ಕತ್ತಿಯಿಂದ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಮಹಿಳೆಯ ಮೂಗು ಕಟ್ ಆಗಿದೆ. ಮುಖ, ಗುಪ್ತಾಂಗದ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನಕ್ಕೆ ಮುಂದಾಗಿದ್ದಾನೆ. ಹಲ್ಲೆಯ ಬಳಿಕ ಪತಿ ಮತ್ತು ಆತನ ಕುಟುಂಬಸ್ಥರು ಗ್ರಾಮದಿಂದ ಕಾಲ್ಕಿತ್ತಿದ್ದಾರೆ.
Advertisement
Advertisement
ಇನ್ನೂ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ಪತಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.