– ಸಾಮಾಜಿಕ ಜಾಲತಾಣದಲ್ಲಿ ಕ್ರೂರತೆಯ ವೀಡಿಯೋ ವೈರಲ್
ಹೈದಾರಾಬಾದ್: ಸೊಸೆಯೊಬ್ಬಳು ತನ್ನ 55 ವರ್ಷದ ಅತ್ತೆಯ ಜುಟ್ಟು ಹಿಡಿದು ಮನೆಯಿಂದ ಹೊರಗಡೆ ಎಳೆದಾಡಿಕೊಂಡು ಬಂದು ಹಿಗ್ಗಾಮುಗ್ಗ ಥಳಿಸಿದ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
Advertisement
ಪಾಪಿ ಸೊಸೆ ಉಜ್ಮಾ ಬೇಗಂ, ಅತ್ತೆ ತಶಾನಿಮಾ ಸುಲ್ತಾನಾ ಅವರ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಘಟನೆ ಹುಮಾಯೂನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಿರೋಜ್ ಗಾಂಧಿ ನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಸೊಸೆ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸೊಸೆ ತನ್ನ ಅತ್ತೆ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
Advertisement
ತಶಾನಿಮಾ ಸುಲ್ತಾನಾ ಮತ್ತು ಅಹ್ಮದ್ ಸಯೀದ್ ಖಾನ್ ಅವರ ಪುತ್ರ ಉಬೈದ್ ಅಲಿ ಖಾನ್ ಕಳೆದ ಒಂದು ದಶಕದಿಂದ ಸೌದಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಉಬೈದ್ ಅವರಿಗೆ 2019ರಲ್ಲಿ ಉಜ್ಮಾ ಬೇಗಂ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾರೆ. ಎರಡನೇ ವಿವಾಹದ ಒಂದು ತಿಂಗಳ ಬಳಿಕ ಉಬೈದ್ ಸೌದಿಗೆ ತೆರಳಿದ್ದಾರೆ.
Advertisement
ಇತ್ತ ಎರಡನೇ ಪತ್ನಿ ಉಜ್ಮಾ ಬೇಗಂ, ಉಬೈದ್ ವೃದ್ಧ ತಾಯಿ ತಶಾನಿಮಾ ಸುಲ್ತಾನಾಗೆ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಹುಮಾಯೂನ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಅಕ್ಟೋಬರ್ 8ರಂದು ಹೈದರಾಬಾದ್ ನ ಮಲ್ಲೆಪಲ್ಲಿಯಲ್ಲಿ ನಡೆದಿದ್ದಾಗಿದೆ. ಉಜ್ಮಾ ಬೇಗಂ ಹಾಗೂ ತಶಾನಿಮಾ ಮಧ್ಯೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದ್ದು, ಈ ವೇಳೆ ಉಜ್ಮಾ ಸಿಟ್ಟಿನಿಂದ ತನ್ನ ಅತ್ತೆಯ ತಲೆಗೂದಲು ಹಿಡಿದು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದಿದ್ದಾಳೆ. ಅಲ್ಲದೆ ಕೂದಲು ಹಿಡಿದುಕೊಂಡು ಹಿಗಾಮುಗ್ಗ ಹಲ್ಲೆ ಮಾಡಿದ್ದಾಳೆ. ಈ ವೇಳೆ ಉಜ್ಮಾನಿಗೆ ಆಕೆಯ ತಾಯಿ ಕೂಡ ಸಾಥ್ ನೀಡಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.
ಇನ್ನೊಂದು ವಿಚಾರ ಎಂದರೆ, ಉಜ್ಮಾ ಹಲ್ಲೆ ಮಾಡುತ್ತಿರುವುದನ್ನು ಬಾಲಕನೊಬ್ಬ ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡುವುದನ್ನು ಕೂಡ ನಾವು ಕಾಣಬಹುದಾಗಿದೆ. ಉಜ್ಮಾ ತನ್ನ ಅತ್ತೆ ಮೇಲೆ ರೌದ್ರ ನರ್ತನ ತೋರುತ್ತಿದ್ದಂತೆಯೇ ಇನ್ನೊಬ್ಬ ಮಹಿಳೆ ಅಂದರೆ ಉಜ್ಮಾ ತಾಯಿ ಕೂಡ ಮಗಳ ಜೊತೆ ಸೇರಿಕೊಂಡು ವೃದ್ಧೆಗೆ ಥಳಿಸಿತ್ತಿರುವಾಗ ಬಾಲಕ ವೀಡಿಯೋ ಮಾಡಿರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಹೈದರಾಬಾದ್ ಪೊಲೀಸರು ಹೊಸದಾಗಿ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.