ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ತಮ್ಮ ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಅಭಿಮಾನಿಗಳು ಜೊತೆ ಶೇರ್ ಮಾಡುತ್ತಿರುತ್ತಾರೆ. ಇದೀಗ ತಮ್ಮ ಮಕ್ಕಳು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೆಲ್ಫಿಗಾಗಿ ಪರದಾಡಿದ ರಾಧಿಕಾ- ಬೇಸರಗೊಂಡು ವಿಡಿಯೋ ಮಾಡಿದ ಯಶ್, ಐರಾ
Advertisement
ನಟಿ ರಾಧಿಕಾ ಪಂಡಿತ್ ಸದ್ಯಕ್ಕೆ ತಮ್ಮ ಇಬ್ಬರು ಮುದ್ದು ಮಕ್ಕಳ ಪೋಷಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಇದೀಗ ತಮ್ಮ ಮಗ ಯಥರ್ವ್ ನ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Advertisement
Advertisement
ಮೊದಲಿಗೆ ಯಥರ್ವ್ ಅಪ್ಪ ಯಶ್ ಮತ್ತು ಅಮ್ಮ ರಾಧಿಕಾ ಫೋಟೋ ಮುಂದೆ ಕುಳಿತಿದ್ದು, ಇಬ್ಬರನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದನು. ಈ ಮಧ್ಯೆ ಸಹೋದರಿ ಐರಾ ಬಂದು ತನ್ನ ಮುದ್ದು ತಮ್ಮನಿಗೆ ರಾಧಿಕಾ ಫೋಟೋ ತೋರಿಸಿ ಇದು ಅಮ್ಮ ಎಂದು ಹೇಳಿಕೊಟ್ಟಿದ್ದಾಳೆ. ಈ ವಿಡಿಯೋವನ್ನು ರಾಧಿಕಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
Advertisement
ಅಲ್ಲದೇ “ವಿದ್ಯಾರ್ಥಿ ಟೀಚರ್ ಆದಾಗ, ನನ್ನ ಕೆಲಸ ಮುಗಿದಿದೆ” ಎಂದು ಬರೆದುಕೊಂಡಿದ್ದಾರೆ. ಅಂದರೆ ಈ ಹಿಂದೆ ರಾಧಿಕಾ ತಮ್ಮ ಮಗಳು ಐರಾಗೆ ಯಶ್ ಮತ್ತು ತಮ್ಮ ಜೋಡಿ ಫೋಟೋವನ್ನು ತೋರಿಸಿ ಅಪ್ಪ, ಅಮ್ಮನ ಗುರುತಿಸುವಂತೆ ಹೇಳಿಕೊಟ್ಟಿದ್ದರು. ಆಗ ಐರಾ ವಿದ್ಯಾರ್ಥಿನಿಯಾಗಿದ್ದಳು. ಈಗ ತನ್ನ ಸಹೋದರ ಯಥರ್ವ್ ನಿಗೆ ಟೀಚರ್ ಆಗಿ ಅಪ್ಪ-ಅಮ್ಮ ಫೋಟೋ ತೋರಿಸಿ ಅಮ್ಮ ಹೇಳಿದ ರೀತಿಯೇ ಹೇಳಿಕೊಟ್ಟಿದ್ದಾಳೆ.
ಇತ್ತೀಚೆಗೆಷ್ಟೆ ರಾಧಿಕಾ ಒಳ್ಳೆಯ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪರಾಡಿದ್ದರು. ರಾಧಿಕಾ ಆ ಕಡೆ ಈ ಕಡೆ ಕುಳಿತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಪತಿ ಯಶ್ ಹಾಗೂ ಮಗಳು ಐರಾ ಜೊತೆಗೋಡಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ರಾಧಿಕಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.
https://www.instagram.com/p/CFd-US7gvx0/?igshid=1ggota00xbp69
“ಹುಡುಗಿಯರು ಸೆಲ್ಫಿ ತೆಗೆದುಕೊಳ್ಳುವಾಗ ಒಳ್ಳೆಯ ಬ್ಯಾಗ್ರೌಂಡ್ಗಾಗಿ ಹುಡುಕಾಡುತ್ತಾರೆ. ಹೇಗೆ ನಿಂತರೆ ಒಳ್ಳೆಯ ಫೋಟೋ ಬರುತ್ತೆ ಎಂದು ಯೋಚಿಸಿ ಫೋಟೋ ತೆಗೆಯುತ್ತಾರೆ. ಒಟ್ಟಾರೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ತುಂಬಾನೇ ಕಷ್ಟಕರ. ನಾನು ಪರದಾಡುತ್ತಿರುವುದನ್ನು ನೋಡಿ ಬೇಸರಗೊಂಡ ಅಪ್ಪ-ಮಗಳು ನನಗೆ ಗೊತ್ತಿಲ್ಲದೆ ವಿಡಿಯೋ ಮಾಡಿದ್ದಾರೆ ಎಂದು ಬರೆದುಕೊಂಡಿದ್ದರು.