– ಎಲ್ಲೆಡೆಯಿಂದ್ಲೂ ವ್ಯಕ್ತವಾಯ್ತು ಪ್ರಶಂಸೆ
ಭೋಪಾಲ್: ತನ್ನ ಕೈಯಾರೆ ಶೌಚಾಲಯ ಶುಚಿಗೊಳಿಸುವ ಮೂಲಕ ಮಧ್ಯಪ್ರದೇಶದ ಸಚಿವ ಪ್ರಧುಮಾನ್ ಸಿಂಗ್ ತೋಮರ್ ಭಾರೀ ಸುದ್ದಿಯಾಗಿದ್ದು, ಸದ್ಯ ಅವರಿಗೆ ಪ್ರಶಂಸೆಗಳ ಸುರಿಮಳೆಯೇ ಬರುತ್ತಿದೆ.
ಹೌದು. ಸಚಿವರಿಗೆ ಗ್ವಾಲಿಯರ್ನ ಆಯುಕ್ತರ ಕಚೇರಿಯ ಸಾರ್ವಜನಿಕ ಶೌಚಾಲಯ ದುರ್ನಾತ ಬೀರುತ್ತಿದೆ ಎಂದು ಕೆಲ ಮಹಿಳೆಯರು ದೂರು ನಿಡಿದ್ದರು. ಈ ಹಿನ್ನೆಲೆಯಲ್ಲಿ ಪರಶೀಲನೆ ನಡೆಸಲೆಂದು ಸಚಿವರು ತೆರಳಿದ್ದರು. ಈ ವೇಳೆ ಶೌಚಾಲಯ ಗಲೀಜಾಗಿರುವುದು ಕಂಡು ಬಂದಿದೆ.
Advertisement
Advertisement
ಈ ವೇಳೆ ಸಮಯ ವ್ಯರ್ಥ ಮಾಡದ ಸಚಿವರು ಕೂಡಲೇ ಟಾಯ್ಲೆಟ್ ಕ್ಲೀನರ್, ಬ್ರಶ್ ಇತ್ಯಾದಿಗಳನ್ನು ತಂದುಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾನೇ ತನ್ನ ಕೈಯಾರೆ ಶೌಚಾಲಯ ಕ್ಲೀನ್ ಮಾಡಲು ಆರಂಭಿಸಿದರು. ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿನ ಶೌಚಾಲಯಗಳನ್ನು ಶುಚಿಯಾಗಿಡುವ ಜವಾಬ್ದಾರಿಯನ್ನು ಅಲ್ಲಿನ ನೌಕರರೇ ತೆಗೆದುಕೊಳ್ಳಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
Advertisement
Advertisement
ಕೊಳಕಾಗಿರುವ ಶೌಚಾಲಯ ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತೀವ್ರ ತೊಂದರೆ ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ ಪ್ರತಿ ದಿನ ಶೌಚಾಲಯಗಳನ್ನು ಶುಚಿಗೊಳಿಸಬೇಕು ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹ್ಹಾಣ್ ಅವರು ಸ್ವಚ್ಛತೆ ಕಾಪಾಡಬೇಕು ಎಂದು ನಿರಂತರವಾಗಿ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಚೇರಿಗಳನ್ನು ಸುಚಿಯಾಗಿಟ್ಟುಕೊಳ್ಳಲೇ ಬೇಕು ಎಂದು ಅವರು ತಿಳಿಸಿದ್ದಾರೆ.
ತೋಮರ್ ಅವರದ್ದು ಇದೇ ಮೊದಲ ಕೆಲಸವಲ್ಲ. ಈ ಹಿಂದೆಯೂ ಅವರು ಶುಚಿತ್ವ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಮೊದಲು ಅವರು ಚರಂಡಿಯಲ್ಲಿ ನೀರು ನಿಂತಿದ್ದನ್ನು ಕಂಡು ತಾವೇ ಸ್ವತಃ ಸಲಿಕೆಯ ಮುಖಾಂತರ ಸರಿ ಮಾಡಿದ್ದರು.
हमारा इंदौर स्वच्छता में प्रथम स्थान पर है इस उत्कृष्ट स्थान को बरकरार रखने के लिए शहर को साफ स्वच्छ बनाए रखना हमारी भी जिम्मेदारी है|
आज इंदौर में वेयर हाउस परिसर में गन्दगी देख #वास्तविक_सफाई_अभियान जारी रख वेयर हाउस प्रबंधन को परिसर साफ-स्वच्छ बनाए रखने के लिए निर्देशित किया| pic.twitter.com/Y2UtvXjM1q
— Pradhuman Singh Tomar (@PradhumanGwl) January 20, 2020