– ಗೂಗಲ್ ಪೇ ಮೂಲಕ ಹಣವರ್ಗಾವಣೆ
ಪುಣೆ: ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ತರಬೇತುದಾರನೊಬ್ಬ ಮಹಿಳಾ ಟೆಕ್ಕಿಯಿಂದ 2.5 ಲಕ್ಷ ರೂ. ದೋಚಿರುವ ಘಟನೆ ಪುಣೆಯ ಕೊಂಡ್ವಾ ಪ್ರದೇಶದಲ್ಲಿ ನಡೆದಿದೆ.
Advertisement
ಶ್ರೀದೇವಿ ರಾವ್(35) ಅವರನ್ನು ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದ ಫೋನ್ ಮೂಲಕ ಹಣವನ್ನು ಆರೋಪಿ ವರ್ಗಾಯಿಸಿಕೊಂಡಿದ್ದಾನೆ. ಎಟಿಎಂ ಕಾರ್ಡ್ ನಿಂದ ಹಣವನ್ನು ತೆಗೆದಿದ್ದಾನೆ. ಟೆಕ್ಕಿ ಧರಿಸಿದ್ದ ಚಿನ್ನಾಭರಣವನ್ನು ಸಹ ಲೂಟಿ ಮಾಡಿದ್ದಾನೆ. ನಗದು ಮತ್ತು ಚಿನ್ನಾಭರಣ ಒಟ್ಟು ಸೇರಿಸಿ 2.5 ಲಕ್ಷ ರೂ. ಮೊತ್ತವನ್ನು ದೋಚಿದ್ದಾನೆ ಎಂದು ಟೆಕ್ಕಿ ಆರೋಪ ಮಾಡಿದ್ದಾರೆ.
Advertisement
ಆರೋಪಿ ಪರಿಚಿತನಾಗಿದ್ದು, ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಟೆಕ್ಕಿಗೆ ಕಳೆದ ಎಂಟು ದಿನಗಳಿಂದ ಡ್ರೈವಿಂಗ್ ಕಲಿಸುವ ನೆಪದಲ್ಲಿ ಹಣ ದೋಚಿ ಪರಾರಿಯಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಂಧ್ವಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ಸಿಂಗ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement
ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಈ ಮಹಿಳೆ ಪೊಷಕರು ಕೊಂಧ್ವಾದಲ್ಲಿ ವಾಸಿಸುತ್ತಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಅವರು ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ಟೆಕ್ಕಿಗೆ ರಾಜೇಶ್ ಸಿಂಗ್ ಎಂಬುವ ವ್ಯಕ್ತಿ ಡ್ರೈವಿಂಗ್ ಹೇಳಿಕೊಡುವ ನೆಪದಲ್ಲಿ ಹಣವನ್ನು ದೋಚಿದ್ದಾನೆ.
Advertisement
ದೂರಿನಲ್ಲಿ ಏನಿದೆ?
ರಾಜೇಶ್ ಸಿಂಗ್ ಡ್ರೈವಿಂಗ್ ಹೇಳಿ ಕೊಡುವ ನೆಪದಲ್ಲಿ ತನ್ನ ಸ್ನೇಹಿತರೊಂದಿಗೆ ಪ್ರತ್ಯೇಕ ಸ್ಥಳಕ್ಕೆ ಕರೆದೊಕೊಂಡು ಹೋಗಿ ಗೂಗಲ್ ಪೇ ಮೂಲಕ 40 ಸಾವಿರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ. ಎಟಿಎಂ ಕಾರ್ಡ್ನಿಂದ 10 ಸಾವಿರ ರೂ. ಗಳನ್ನು ತೆಗೆದುಕೊಂಡಿದ್ದು ಅಲ್ಲದೇ 2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾನೆ. ನನ್ನ ಕೈಗಳನ್ನು ಕಟ್ಟಿ ಹಣವನ್ನು ಫೋನ್ ಮೂಲಕ ವರ್ಗಾಯಿಸಬೇಕೆಂದು ಒತ್ತಾಯಿಸಿ ಮೊಬೈಲ್ಫೋನ್ ಕಸಿದುಕೊಂಡನು. ಅಗತ್ಯವಿರುವ ಎಲ್ಲಾ ಪಾಸ್ವರ್ಡ್ಗಳ ನನ್ನಿಂದ ಪಡೆದುಕೊಂಡು ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ಟೆಕ್ಕಿ ದೂರು ನೀಡಿದ್ದಾನೆ.
ನಗದು ಮತ್ತು ಚಿನ್ನಾಭರಣ ಸೇರಿ ಒಟ್ಟು 2.5 ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಟೆಕ್ಕಿ ಮಹಿಳೆಯಿಂದ ಲೂಟಿ ಮಾಡಲಾಗಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಆರೋಪಿಗಳನ್ನೂ ಹುಡುಕುತ್ತೇವೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 363 (ಅಪಹರಣ) ಮತ್ತು 394 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೊಂಧ್ವಾ ಪಿಎಸ್ನ ಹಿರಿಯ ಪೆÇಲೀಸ್ ಇನ್ಸ್ಪೆಕ್ಟರ್ ಸರ್ದಾರ್ ಪಾಟೀಲ್ ತಿಳಿಸಿದ್ದಾರೆ.