– ಕೇಸ್ ಸಾಬೀತಾದ್ರೆ ಸತ್ತವನಿಗೆ ಶಿಕ್ಷೆ ಕೊಡೋಕಾಗುತ್ತಾ
– ಸ್ಯಾಂಡಲ್ವುಡ್ಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಕೆಟ್ಟ ಹೆಸ್ರು
ದಾವಣಗೆರೆ: ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ನನಗೆ ತುಂಬಾ ಬೇಸರವಾಯಿತು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಗರದ ಬಾಪೂಜಿ ಗೆಸ್ಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕ್ಲಾಸ್ ಎಂದ ಮೇಲೆ ಫಸ್ಟ್ ರ್ಯಾಂಕ್ ವಿದ್ಯಾರ್ಥಿ ಇರುತ್ತಾರೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಕೂಡ ಇರುತ್ತಾರೆ. ಅದಕ್ಕೆ ಇಡೀ ಕ್ಲಾಸ್ ಝೀರೋ ಅಂತೀರಾ. ಹಾಗೇ ಸ್ಯಾಂಡಲ್ವುಡ್ ಕೂಡ ಎಂದರು. ಇದನ್ನೂ ಓದಿ: ಮೊದಲು ಡ್ರಗ್ಸ್ ಮಾಫಿಯಾದ ಬುಡ ಕಿತ್ತು ಬಿಸಾಕಬೇಕು: ನಟ ಜೆಕೆ
Advertisement
ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರನ್ನು ಹೇಳುತ್ತಿರುವುದು ನನಗೆ ತುಂಬಾ ಬೇಸರವಾಯಿತು. ಚಿರು ಸತ್ತು ಮೂರು ತಿಂಗಳು ಆಗಿದೆ. ಅವನು ಎಲ್ಲಿದ್ದಾನೋ, ಹೇಗಿದ್ದಾನೋ ಗೊತ್ತಿಲ್ಲ. ಒಂದು ವೇಳೆ ಈ ಕೇಸ್ ಆಗಿ ಸಾಬೀತಾಯಿತು ಅಂದರೆ ಅವನಿಗೆ ಶಿಕ್ಷೆ ಕೊಡಲು ಆಗುತ್ತಾ. ಸತ್ತೋನು ಕೊಲೆಗಾರನಾದರೂ ನಾವು ವರ್ಷದ ತಿಥಿ ಮಾಡುತ್ತೇವೆ. ಇದನ್ನು ನಮ್ಮ ತಂದೆ-ತಾಯಿ ಹೇಳಿಕೊಟ್ಟಿದ್ದಾರೆ. ಅವನು ಒಳ್ಳೆಯವನು ಕೆಟ್ಟೋನು ಎಂದು ನೋಡುವುದಿಲ್ಲ. ಸತ್ತ ಮೇಲೆ ಅವರ ಬಗ್ಗೆ ಒಳ್ಳೆಯ ಮಾತನಾಡೋಣ. ದಯವಿಟ್ಟು ಕೆಟ್ಟದಂತೂ ಮಾತನಾಡಬೇಡಿ ಎಂದು ದರ್ಶನ್ ಮನವಿ ಮಾಡಿಕೊಂಡರು.
Advertisement
Advertisement
ನಾನು ಕೂಡ ಈ ಫೀಲ್ಡ್ಗೆ ಬಂದು 28 ವರ್ಷ ಆಯಿತು. ಲೈಟ್ ಬಾಯ್ಯಿಂದ ಇಲ್ಲಿವರೆಗೂ ಬಂದಿದ್ದೇನೆ. ಆದರೆ ಇದುವರೆಗೂ ನಮಗೆ ಈ ರೀತಿ ಅನುಭವ ಆಗಿಲ್ಲ. ಸ್ಯಾಂಡಲ್ವುಡ್ನಲ್ಲಿ ಇದುವರೆಗೂ ಈ ಬಗ್ಗೆ ನಾನು ಕೇಳಿಲ್ಲ ನೋಡಿಲ್ಲ. ಡ್ರಗ್ಸ್ ಕೇಸ್ ಇಡೀ ಸ್ಯಾಂಡಲ್ವುಡ್ಗೆ ಮಾತ್ರ ಅಲ್ಲ. ಇಡೀ ಕರ್ನಾಟಕಕ್ಕೆ ಕೆಟ್ಟ ಹೆಸರು ಎಂದು ನಟ ದರ್ಶನ್ ಹೇಳಿದರು. ಇದನ್ನೂ ಓದಿ: ನನಗೂ ಅಪ್ರೋಚ್ ಮಾಡಿದ್ರು, ಆದ್ರೆ ನಾನು ಅದನ್ನ ಮುಟ್ಟಿಲ್ಲ – ‘ಗಟ್ಟಿಮೇಳ’ ಖ್ಯಾತಿಯ ನಟ ರಕ್ಷ್
Advertisement
ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದನ್ನು ಕಾದು ನೋಡೋಣಾ. ಸ್ಯಾಂಡಲ್ವುಡ್ನಲ್ಲಿ ಮಾತ್ರ ಅಲ್ಲ, ಎಲ್ಲಾ ಕಡೆ ಇರಬಹುದು ಎಂದರು. ಇನ್ನೊಬ್ಬರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದು ಇಂದ್ರಜಿತ್ ಲಂಕೇಶ್ ಆರೋಪದ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದರು.