ಚಿಕ್ಕಮಗಳೂರು: ಡ್ರಗ್ ಮಾಫಿಯಾ ಇವತ್ತು, ನಿನ್ನೆಯದ್ದಲ್ಲ. ಆಗಾಗ ಮಾಫಿಯಾವನ್ನು ನಿಯಂತ್ರಿಸುವ ಕಾರ್ಯ ಮಾಡಿದ್ದರು ಕೂಡ ಅದನ್ನು ಬೇರು ಸಮೇತ ಕಿತ್ತುಹಾಕಲು ಸಾಧ್ಯವಾಗಿಲ್ಲ. ಈಗ ಸರ್ಕಾರ ಮಾಫಿಯಾವನ್ನು ಗಂಭೀರವಾಗಿ ಪರಿಗಣಿಸಿದೆ. ಆದರೆ ತನಿಖಾ ತಂಡದ ಮೇಲೆ ಒತ್ತಡ ತರುವಂತಹ ಕೆಲಸ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಡ್ರಗ್ ಮಾಫಿಯಾವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, 84ಕ್ಕೂ ಹೆಚ್ಚು ಜನರನ್ನ ವಿಚಾರಣೆ ಮಾಡುವ ಕೆಲಸವಾಗಿದೆ. ಈ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಂಡಿಲ್ಲ. ಈಗಾಗಲೇ ಗೃಹ ಸಚಿವರು ಈ ಕುರಿತು ಮಾತನಾಡಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ. ಮಾಫಿಯಾದಲ್ಲಿ ಯಾರೇ ಇದ್ದರೂ ಕಠಿಣ ಕ್ರಮಕೈಗೊಳ್ಳುತ್ತೇವೆ. ಯುವ ಜನರನ್ನು ಪಿಡುಗಿನಿಂದ ಮುಕ್ತಗೊಳಿಸಬೇಕೆಂಬ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಸರ್ಕಾರ ಡ್ರಗ್ಸ್ ಮಾಫಿಯಾವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಿಸುತ್ತಿದ್ದೆ. ಆದ್ದರಿಂದಲೇ ತನಿಖಾ ತಂಡದ ಮೇಲೆ ಒತ್ತಡ ತರುವ ಹಾಗೂ ಕೆಲವೊಮ್ಮೆ ವಿಷಯಾಂತರ ಗೊಳಿಸುವಂತಹ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಇದಕ್ಕೆಲ್ಲಾ ಸರ್ಕಾರ ಮಣಿಯುವುದಿಲ್ಲ ಎಂದು ಹೇಳಿದರು.
Advertisement
ಡ್ರಗ್ಸ್ ಮಾಫಿಯಾದಲ್ಲಿ ಈಗಾಗಲೇ ಕೆಲ ಸಾಕ್ಷಿಗಳನ್ನು ಆಧರಿಸಿ ಕೆಲವರನ್ನು ವಶಕ್ಕೆ ಪಡೆಯುವ ಮತ್ತು ಮತ್ತಷ್ಟು ಮಂದಿಯನ್ನು ವಿಚಾರಣೆ ನಡೆಸುವ ಕಾರ್ಯವನ್ನು ಮಾಡುದೆ. ಇದರಿಂದಲೇ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂಬುವುದು ಅರ್ಥವಾಗುತ್ತದೆ. ಈ ಮಾಫಿಯಾ ಇದು ರಾಜ್ಯಕ್ಕೆ ಸೀಮಿತವಾಗಿಲ್ಲ, ಹೊರರಾಜ್ಯ, ಹೊರದೇಶಗಳ ಸಂಪರ್ಕ ಕೂಡ ಇದೆ. ಕೆಲವು ಕಡೆ ಮಾಫಿಯಾ ಭಯೋತ್ಪಾದಕರ ಜೊತೆ ತಳುಕು ಹಾಕಿಕೊಂಡಿದೆ. ಮತ್ತೆ ಕೆಲವು ಕಡೆ ರಾಜಕಾರಣಿಗಳು ಹಾಗೂ ಸಿನಿಮಾ ಸೆಲೆಬ್ರಿಟಿಗಳ ಜೊತೆಯೂ ತಳುಕು ಹಾಕಿಕೊಂಡಿದೆ. ಮಾಫಿಯಾದಲ್ಲಿ ಯಾರೇ ಇದ್ದರೂ ಸರಿಯೇ, ಗಂಭೀರವಾಗಿ ತನಿಖೆಯಾಗುತ್ತದೆ ಎಂದು ತಿಳಿಸಿದರು.