– ಸಿನಿಮಾ ಕಂಪ್ಲೀಟ್ ಆದ್ಮೇಲೆ ಮಾಹಿತಿ ನೀಡುತ್ತೇವೆ: ಕಮಲ್ ಪಂತ್
– ರವಿಶಂಕರ್, ರಾಹುಲ್ ಅರೆಸ್ಟ್
ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳ ಮೇಲೆ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಸಿಬಿ ಮತ್ತು ಬೆಂಗಳೂರು ಸಿಟಿ ಪೊಲೀಸರು ಕಳೆದ 1 ತಿಂಗಳಿನಿಂದ ಡ್ರಗ್ಸ್ ಮಾಫಿಯಾ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಂಜಾ ಪ್ರಕರಣವೊಂದರ ತನಿಖೆ ವೇಳೆ ಸರ್ಕಾರಿ ನೌಕರರೊಬ್ಬರು ಇದರಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ವೇಳೆ ಪೊಲೀಸರು ಅವರನ್ನು ಹತ್ತಿರದಿಂದ ಹಿಂಬಾಲಿಸಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಅವರು ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವುದು ಖಚಿತವಾಗಿತ್ತು. ಇದನ್ನೂ ಓದಿ: ನನ್ಗೆ ಮಾತ್ರ ಅಲ್ಲ, ರಾಹುಲ್ ಸಾಕಷ್ಟು ಸಿನಿಮಾ ಸ್ಟಾರ್ಗಳಿಗೆ ಪರಿಚಯ: ಸಂಜನಾ ಸ್ಫೋಟಕ ಹೇಳಿಕೆ
Advertisement
Advertisement
ಡ್ರಗ್ಸ್ ಪೂರೈಕೆ ಖಚಿತವಾಗುತ್ತಿದಂತೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದೇವು. ಈ ವೇಳೆ ಆತ ಡ್ರಗ್ಸ್ ಡೀಲ್ ಮಾಡಿದ್ದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದ. ಅಲ್ಲದೇ ಆತನ ಮೊಬೈಲ್ ಸೇರಿದಂತೆ ಇತರೇ ತಾಂತ್ರಿಕ ಮೂಲಗಳಿಂದ ಸಾಕಷ್ಟು ಮಾಹಿತಿ ಲಭ್ಯವಾಗಿತ್ತು. ಆತ ನೀಡಿದ ಮಾಹಿತಿ ಅನ್ವಯ 2ನೇ ಹಂತದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
Advertisement
ಸದ್ಯ ಸರ್ಕಾರಿ ಅಧಿಕಾರಿ ನೀಡಿದ ಮಾಹಿತಿ ಮೇರೆಗೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಅವರ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತಿದೆ. ಮತ್ತೊಬ್ಬ ಆರೋಪಿ ರಾಹುಲ್ ಎಂಬಾತ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ. ಈತ ಕೂಡ ಬೇರೆ ಬೇರೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಬಗ್ಗೆ ಮಾಹಿತಿ ಲಭಿಸಿದೆ. ಇದರ ಅನ್ವಯ ಆತನನ್ನು ಬಂಧಿಸಲಾಗಿದೆ. ಆತ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದೇವೆ ಎಂದರು. ಪ್ರಕರಣದ ಬಗ್ಗೆ ಟೀಸರ್ ಬಿಡುಗಡೆ ಮಾಡಿದ್ದೀರಾ ಸಿನಿಮಾ ಯಾವಾಗ ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಕಮಿಷನರ್ ಅವರು, ಸಿನಿಮಾ ಕಂಪ್ಲೀಟ್ ಆದಾಗ ಎಂದು ಉತ್ತರಿಸಿದರು. ಇದನ್ನೂ ಓದಿ: ಡ್ರಗ್ಸ್ ಮಾಫಿಯಾ ಪ್ರಕರಣ ತನಿಖೆ ನಡೆಸುತ್ತಿರೋ ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತಿದೆ: ಸಿಟಿ ರವಿ
Advertisement
ನಟಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ತನಿಖೆಯ ಹಂತದಲ್ಲಿ ಇರುವ ಕಾರಣ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದಿಲ್ಲ. ಹಂತ ಹಂತವಾಗಿ ಪ್ರಕರಣ ತನಿಖೆ ನಡೆಯುತ್ತಿದಂತೆ ಹೆಚ್ಚಿನ ಮಾಡುತ್ತೇವೆ. ಈಗಾಗಲೇ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಇಂದ್ರಜಿತ್ ಅವರು ಹಿಂದಿನ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದರು. ಆ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿ ಅನ್ವಯ ಬಂಧಿತ ಆರೋಪಿಗಳು ವಿದೇಶಿ ವ್ಯಕ್ತಿಯಿಂದ ಡ್ರಗ್ ಪಡೆಯುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. ಪ್ರಕರಣ ತನಿಖೆಯನ್ನು ಕಾನೂನಿನ ಅನ್ವಯ ಅಳವಾಗಿ ಮಾಡಲಾಗುತ್ತಿದೆ. ಖಂಡಿತ ಪ್ರಕರಣದ ಅಳವಾದ ತನಿಖೆಯನ್ನು ಮಾಡಿ ಮಾಹಿತಿ ನೀಡುತ್ತೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ರವಿ ಕುಮಾರ್ ಉಪಸ್ಥಿತಿದ್ದರು. ಇದನ್ನೂ ಓದಿ: ಡ್ರಗ್ಗೆ ಚಿಕ್ಕನ್ ಪೀಸ್ ಎನ್ನುತ್ತಿದ್ದ ರಾಗಿಣಿ – ತುಪ್ಪದ ಬೆಡಗಿ ಕೋಡ್ವರ್ಡ್ ರೀವಿಲ್
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಮೇಲೆ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಲಾಗಿದೆ. ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಟ್ಸಾಪ್ ಮೆಸೇಜ್ಗಳು ಹಾಗೂ ಪೆಡ್ಲರ್ ಗಳ ನೀಡಿರುವ ಮಾಹಿತಿ ಅನ್ವಯ ನಟಿ ರಾಗಿಣಿ ಅವರ ಕೈವಾಡದ ಬಗ್ಗೆ ಸಾಕ್ಷಿ ಲಭ್ಯವಾಗಿದ್ದು, ಡ್ರಗ್ ಡೀಲರ್ ಗಳ ಜೊತೆ ಒಡನಾಟವನ್ನು ಹೊಂದಿದ್ದಾರೆ. ಅನೇಕ ಬಾರಿ ಡ್ರಗ್ ಡೀಲ್ ಮಾಡಿರುವ ಬಗ್ಗೆ ಮಾಹಿತಿ ಖಚಿತವಾದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ. ಇದನ್ನೂ ಓದಿ: ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ