ಬೆಂಗಳೂರು: ಡ್ರಗ್ ದಂಧೆ ವಿರುದ್ಧ ಸಮರ ರಾಜ್ಯವ್ಯಾಪಿ ನಡೀತಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ 1,350 ಕೆಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಈ ಕಾರ್ಯಚರಣೆ ಕಲಬುರಗಿ, ಬೆಂಗಳೂರು ಮತ್ತು ಬೀದರ್ ಪೊಲೀಸರ ಸಹಕಾರದಿಂದ ಯಶಸ್ವಿಯಾಗಿದೆ. ಈ ಕಾರ್ಯಚರಣೆ ರಾಜ್ಯದಲ್ಲಿ ಮುಂದುವರೆಯಲಿದೆ ಎಂದು ತಿಳಿಸಿದರು.
Advertisement
Advertisement
ಜಡ್ಡು ಗಟ್ಟಿದ ಡ್ರಗ್ ದಂಧೆ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ. ಯಾವುದೇ ಮೂಲಗಳಿಂದ ಮಾಹಿತಿ ಬಂದರೂ ಗಂಭೀರವಾಗಿ ಪರಿಗಣಿಸಲು ಪೊಲೀಸರಿಗೆ ಸೂಚಿಸಿದ್ದೇನೆ. ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನೂ ಪರಿಗಣಿಸುವಂತೆ ಹೇಳಿದ್ದೇನೆ. ಈ ವಿಚಾರದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು
Advertisement
Advertisement
ಇದೇ ವೇಳೆ ಶಾಸಕ ಜಮೀರ್ ಬಂಧನ ಯಾಕೆ ಇನ್ನೂ ಆಗಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದಂಧೆಯಲ್ಲಿ ಯಾವುದೇ ಮೂಲದಿಂದ ಯಾರ ಹೆಸರು ಕೇಳಿ ಬಂದರೂ ತನಿಖೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಇದರಲ್ಲಿ ಯಾರೇ ಇದ್ದರು ಪೊಲೀಸರು ತನಿಖೆ ಮಾಡುತ್ತಾರೆ ಎಂದು ಜಮೀರ್ ಹೆಸರನ್ನು ಪ್ರಸ್ತಾಪಿಸದೇ ಗೃಹ ಸಚಿವರು ಉತ್ತರ ನೀಡಿದ್ದಾರೆ.
ಆರೋಪಿ ವೀರೇನ್ ಖನ್ನಾ ಆಸ್ತಿ ಸಂಬಂಧ ಇಡಿ ಎಂಟ್ರಿ ವಿಚಾರವಾಗಿ ಮಾತನಾಡಿ, ಡ್ರಗ್ಸ್ ದಂಧೆಯಲ್ಲಿ ಹಣಕಾಸು ಆಯಾಮವೂ ಇದೆ. ದೇಶದ ಹೊರಗೂ ಇವರು ಸಂಬಂಧಗಳನ್ನೂ ಹೊಂದಿರುವ ಶಂಕೆ ಇದೆ. ಇತರೇ ವ್ಯವಹಾರಗಳನ್ನು ನಡೆಸುವವರ ಜೊತೆ, ಹವಾಲಾ ಸಂಬಂಧವೂ ಇದೆ. ಹೀಗಾಗಿ ಈ ಎಲ್ಲ ಆಯಾಮಗಳನ್ನು ಪೂರ್ಣವಾಗಿ ತನಿಖೆ ನಡೆಸಲು ಇಡಿಯವರು ಬಂದಿದ್ದಾರೆ. ಈ ಪ್ರಕರಣದಲ್ಲಿ ಇಡಿಯವರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.