– ಡ್ರಗ್ಸ್ ಡೀಲರ್ ಜೊತೆ ವ್ಯವಹಾರ
ಮುಂಬೈ: ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್ ಸೋದರಳಿಯ ಸಮೀರ್ ಖಾನ್ರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ವಿಚಾರಣೆಗೆಂದು ಕರೆಸಿದ್ದ ಅವರನ್ನು ಹಲವು ವಿಚಾರಣೆಗಳ ಬಳಿಕ ಇದೀಗ ಬಂಧಿಸಿದ್ದಾರೆ.
Advertisement
ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ಎಂಬಾತನ ಜೊತೆ ಸಮೀರ್ ಖಾನ್ 20 ಸಾವಿರ ರೂ.ಯಷ್ಟು ವ್ಯವಹಾರ ನಡೆಸಿದ ಹಿನ್ನೆಲೆ ವಿಚಾರಣೆಗೆ ಕರೆಸಲಾಗಿತ್ತು. ಕಳೆದ ವಾರ ಕರಣ್ ಮತ್ತು ಇಬ್ಬರು ಮಹಿಳೆಯರನ್ನ ಪೊಲೀಸರು ಬಂಧಿಸಿ, ಮೂವರ ಬಳಿಯಲ್ಲಿದ್ದ 200 ಕೆಜಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು.
Advertisement
Advertisement
ಕಳೆದ ವಾರ ಬಾಂದ್ರಾ ವೆಸ್ಟ್ಗೆ ಕೊರಿಯರ್ ಮೂಲಕ ಬಂದ ಗಾಂಜಾವನ್ನ ಅಧಿಕಾರಿಗಳು ವಶಪಡಿಕೊಂಡು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಕರಣ್ ಗಾಂಜಾ ಆಮದು ಮಾಡಿಕೊಳ್ಳುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಎನ್ಡಿಪಿಎಸ್ ಕಾಯ್ದೆ ಅಡಿ ಎನ್ಸಿಬಿ ಅಧಿಕಾರಿಗಳು ರಹಿಲ್ ಫರ್ನಿಚರ್ ವಾಲಾ, ಸಹಿಸ್ತಾ ಫರ್ನಿಚರ್ ವಾಲಾ ಮತ್ತು ರಾಮ್ ಕುಮಾರ್ ಅಲಿಯಾಸ್ ಪಾನ್ವಾಲಾನನ್ನು ಬಂಧಿಸಿದ್ದರು.
Advertisement
ಕರಣ್ ವಿಚಾರಣೆ ವೇಳೆ ಡ್ರಗ್ಸ್ ವ್ಯವಹಾರದಲ್ಲಿ ಸಮೀರ್ ಖಾನ್ ಪಾತ್ರವೂ ಕಂಡು ಬಂದ ಹಿನ್ನೆಲೆ ಎನ್ಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಸಮೀರ್ ಖಾನ್ ನನ್ನ ಬಂಧಿಸಲಾಗಿದೆ.