ಲಕ್ನೋ: ಸ್ವಿಗ್ಗಿ ಡೆಲಿವರಿ ಬಾಯ್ ಬಳಿಯಿದ್ದ ಆಹಾರವನ್ನು ಅಪರಿಚಿತ ವ್ಯಕ್ತಿಗಳು ಕಿತ್ತುಕೊಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ವಿಚಾರವಾಗಿ ಗ್ರಾಹಕರೊಬ್ಬರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಚಯನಿಕ್ ದಾಸ್ ಎಂಬವರು ಫುಡ್ ಡೆಲಿವರಿ ಆ್ಯಪ್ ಮೂಲಕ ಮೊದಲ ಬಾರಿಗೆ ನೋಯ್ಡಾ ವಿಳಾಸಕ್ಕೆ ಫುಡ್ ಆರ್ಡರ್ ಮಾಡಿದ್ದರು. ಆದರೆ ಕಳ್ಳರು ಆಹಾರವನ್ನು ದೋಚಿರುವ ಕಾರಣ ಅವರ ಆರ್ಡರ್ ರದ್ದುಗೊಳಿಸಬೇಕಾಯಿತು.
Advertisement
Advertisement
ಈ ವಿಚಾರವಾಗಿ ‘ದಯಾವಿಟ್ಟು ಕ್ಷಮಿಸಿ ನಿಮ್ಮ ಆರ್ಡರ್ ನನ್ನು ಕಳ್ಳರು ದೋಚಿರುವ ಕಾರಣ ನಿಮಗೆ ತಲುಪಿಸಲು ಆಗಲಿಲ್ಲ. ನಿಮಗೆ ಇದರಿಂದ ಅಸಮಾಧಾನ ಉಂಟಾಗುತ್ತದೆ ಎಂದು ತಿಳಿದಿದೆ. ಆದರೂ ನಾನು ಮುಂದುವರಿಸಲೇಬೇಕಾಗಿದೆ ನಿಮ್ಮ ಆರ್ಡರ್ ನನ್ನು ರದ್ದುಗೊಳಿಸಲಾಗುತ್ತಿದೆ. ಇತರೆ ರೆಸ್ಟೋರೆಂಟ್ ಮೂಲಕ ಹೊಸ ಫುಡ್ ಆರ್ಡರ್ ಮಾಡಿಕೊಳ್ಳಿ ಎಂದು ವಿನಂತಿಸುತ್ತೇನೆ’ ಎಂದು ಸ್ವಿಗ್ಗಿ ಸಂದೇಶ ಕಳುಹಿಸಿತ್ತು.
Advertisement
???????????? snatched by others. Yeh Noida mei yeh sab hota hai? pic.twitter.com/uwBRCzGhuX
— Das (@cfc_chaya) January 23, 2021
Advertisement
ಇದನ್ನು ದಾಸ್ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಜೊತೆಗೆ ನೋಯ್ಡಾದಲ್ಲಿ ಇಂತಹ ಘಟನೆಗಳು ಸಹಜ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಹಲವಾರು ಕಮೆಂಟ್ ಗಳು ಹರಿದು ಬರುತ್ತಿದ್ದು, ನೆಟ್ಟಿಗರು ಸ್ವಿಗ್ಗಿಯನ್ನು ಟೀಕಿಸಲು ಆರಂಭಿಸಿದ್ದಾರೆ.
ಈ ಪೋಸ್ಟ್ ಗೆ 1000ಕ್ಕೂ ಅಧಿಕ ಲೈಕ್ಸ್ ಮತ್ತು ಕಾಮೆಂಟ್ಗಳು ಹರಿದು ಬರುತ್ತಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ದಾಸ್ ಗೆ, ನಿಮ್ಮ ಆರ್ಡರ್ ನನ್ನು ಕಳ್ಳರು ದೋಚಿಕೊಂಡು ಫುಡ್ ಡೆಲಿವರಿ ಬಾಯ್ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಹೀಗಾಗಿ ಫುಡ್ ಆರ್ಡರ್ ರದ್ದು ಗೊಳಿಸಲಾಯಿತು ಎಂದು ಕಸ್ಟಮರ್ ಕೇರ್ ನಿಂದ ಕರೆ ಮಾಡಿ ತಿಳಿಸಿದ್ದಾರೆ.