ನವದೆಹಲಿ: ಡಿಸೆಂಬರ್ 31ರವರೆಗೆ ವರ್ಕ್ ಫ್ರಂ ಹೋಂ ಮುಂದುವರಿಸುವಂತೆ ಖಾಸಗಿ ಕಂಪನಿಗಳಿಗೆ ಸರ್ಕಾರ ತಿಳಿಸಿದೆ.
ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಳವಾಗ್ತಿದ್ದಂತೆ ಸರ್ಕಾರದ ಸಲಹೆ ಮೇರೆಗೆ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ತಿಳಿಸಿದ್ದವು. ಐಟಿ ಕಂಪನಿಗಳ ಶೇ.85 ರಷ್ಟು ಉದ್ಯೋಗಿಗಳು ಸದ್ಯ ಮನೆಯಿಂದ ಕೆಲಸ ಮಾಡುತ್ತಿದ್ದಾರೆ.
Advertisement
Advertisement
ದೇಶವು ಅನ್ಲಾಕ್ ಆಗಿದ್ದರೂ ಕೊರೊನಾ ಆತಂಕ ಮಾತ್ರ ಕಡಿಮೆಯಾಗಿಲ್ಲ. ಸರ್ಕಾರ ಜನದಟ್ಟಣೆ ತಡೆಯುವ ಉದ್ದೇಶದಿಂದ ಐಟಿ, ಬಿಪಿಓ ಸೇರಿದಂತೆ ಖಾಸಗಿ ಕಂಪನಿಗಳು ಸಾಧ್ಯವಾದಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿ ಎಂದು ಹೇಳಿದೆ. ಮೊದಲಿಗೆ ಜುಲೈ 31ರವರೆಗೆ ಮಾತ್ರ ವರ್ಕ್ ಫ್ರಂ ಹೋಂಗೆ ಸರ್ಕಾರ ಸೂಚಿಸಿತ್ತು. ಇದೀಗ ಡಿಸೆಂಬರ್ 31ರವರೆಗೆ ಮನೆಯಿಂದ ಕೆಲಸ ಮಾಡಲು ಸರ್ಕಾರ ಹೇಳಿದೆ.
Advertisement