ನವದೆಹಲಿ: ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಶೋಕಾಸ್ ನೋಟಿಸ್ ಬಳಿಕ ಪುಣೆಯ ಸೆರಮ್ ಇನ್ಸಿಟ್ಯೂಟ್ ಆಫ್ ಇಂಡಿಯ ಸಂಸ್ಥೆ ಕೊರೊನಾ ಲಸಿಕೆ ಪ್ರಯೋಗಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
ಪ್ರಯೋಗಗಳನ್ನು ನಿಲ್ಲಿಸಿರುವ ಬಗ್ಗೆ ಇಂದು ಸೆರಮ್ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. ದೇಶದ 17 ಪ್ರದೇಶಗಳಲ್ಲಿ 1,600 ಮಂದಿಯ ಮೇಲೆ ಪ್ರಯೋಗ ನಡೆಸಲಾಗುತ್ತಿತ್ತು ಡಿಸಿಜಿಐ ಶೋಕಾಸ್ ನೋಟಿಸ್ ಹಿನ್ನೆಲೆ ಪ್ರಯೋಗ ನಿಲ್ಲಿಸಿದೆ ಎಂದು ಹೇಳಿದೆ.
Advertisement
Advertisement
ಬ್ರಿಟನ್ ನಲ್ಲಿ ಈ ಲಸಿಕೆ ಪ್ರಯೋಗ ಒಳಪಟ್ಟ ವ್ಯಕ್ತಿಗೆ ಅನಾರೋಗ್ಯ ಉಂಟಾದ ಹಿನ್ನಲೆ, ಅಲ್ಲಿ ಪ್ರಯೋಗಗಳನ್ನು ನಿಲ್ಲಿಸಲಾಗಿದೆ. ಲಸಿಕೆ ಅಭಿವೃದ್ಧಿ ಪಡಿಸಿರುವ ಸಂಸ್ಥೆ ಅಸ್ಟ್ರಾಜೆನಿಕಾ ಪ್ರಯೋಗಗಳು ಪುನಾರಂಭಿಸಿದ ಬಳಿಕವಷ್ಟೇ ಭಾರತದಲ್ಲಿ ಪ್ರಯೋಗಗಳು ಮತ್ತೆ ಆರಂಭವಾಗಲಿದೆ ಎಂದು ಸೆರಮ್ ಹೇಳಿದೆ.
Advertisement
Advertisement
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಆಕ್ಸ್ ಫರ್ಡ್ ಯೂನಿವರ್ಸಿಟಿ ಮತ್ತು ಆಸ್ಟ್ರಾಜೆನೆಕಾ ಫಾರ್ಮಾ ಕಂಪನಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಕೊರೊನಾ ವ್ಯಾಕ್ಸಿನ್ ಅನ್ನು ಭಾರತದಲ್ಲಿ ಮಾನವರ ಮೇಲೆ ಎರಡು ಮತ್ತು ಮೂರನೇ ಹಂತದಲ್ಲಿ ಪ್ರಯೋಗ ನಡೆಸುತ್ತಿತ್ತು.
ಲಸಿಕೆಯಿಂದ ವ್ಯಕ್ತಿ ಅನಾರೋಗ್ಯಕ್ಕೆ ಒಳಪಟ್ಟ ವಿಚಾರ ತಿಳಿಸದ ಹಿನ್ನೆಲೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಶೋಕಾಸ್ ನೋಟಿಸ್ ನೀಡಿತ್ತು. ಮತ್ತು ಕೂಡಲೇ ಪ್ರಯೋಗಗಳನ್ನು ನಿಲ್ಲಿಸಲು ಆದೇಶಿಸಿತ್ತು.