-ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲ್ಲಲಿದೆ
ಚಿತ್ರದುರ್ಗ: ನಾಡಿನ ಜನರು ಶ್ರೀರಾಮುಲುಗೆ ಒಳ್ಳೆಯದಾಗಬೇಕೆಂದು ಬಯಸುತ್ತಾರೆ. ಏನೇ ಸ್ಥಾನ ಕೊಟ್ಟರು ನಿಭಾಯಿಸುವ ಶಕ್ತಿ ಭಗವಂತ ನನಗೆ ನೀಡಿದ್ದಾನೆ. ಪಕ್ಷ ಯಾವ ತಿರ್ಮಾನ ಕೈಗೊಳ್ಳಲಿದೆ ಕಾದು ನೋಡುತ್ತೇನೆ ಅಂತ ಹೇಳುವ ಮೂಲಕ ಪರೋಕ್ಷವಾಗಿ ತಾವು ಡಿಸಿಎಂ ಸ್ಥಾನದ ಆಕಾಂಕ್ಷಿ ಎಂಬ ಸಂದೇಶದವನ್ನು ಸಚಿವ ಶ್ರೀರಾಮಲು ಪಕ್ಷಕ್ಕೆ ರವಾನಿಸಿದ್ದಾರೆ.
Advertisement
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ಪಟ್ಟಣದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಹಾಗೂ ಪಕ್ಷದ ವರಿಷ್ಠರು ಸಂಪುಟ ವಿಸ್ತರಣೆ ಬಗ್ಗೆ ತಿರ್ಮಾನಿಸುತ್ತಾರೆ. ಹಾಗೆಯೇ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕಳಂಕ ತರುವ ಉದ್ದೇಶದಿಂದ ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಇಲ್ಲಸಲ್ಲದ ಅರೋಪ ಮಾಡುತ್ತಿದ್ದಾರೆ. ವಿಧಾನಸಭೆ ಒಳಗಿಲ್ಲದವರ ಬಗ್ಗೆ ಚರ್ಚಿಸಿ ಭ್ರಷ್ಟಾಚಾರದ ಬಗ್ಗೆ ದ್ವನಿ ಎತ್ತಿದ್ದಾರೆ. ಆದ್ರೆ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಮುಂಬರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಶಿರಾ ಹಾಗು ರಾಜರಾಜೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಉಪ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು, ಗೆಲುವಿಗಾಗಿ ತಂತ್ರ ರೂಪಿಸಲಾಗಿದೆ ಹೀಗಾಗಿ ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಚಿವರು ಭವಿಷ್ಯ ನುಡಿದರು.
Advertisement
ಇದೇ ವೇಳೆ ನಾಲ್ಕು ತಿಂಗಳ ಹಿಂದೆ ದಿ. ಸುರೇಶ್ ಅಂಗಡಿಯವರಿಗೆ ಸಿಎಂ ಪಟ್ಟ ಕುರಿತು ಮುರುಳಿಧರ್ ರಾವ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದಿರುವ ಚರ್ಚೆ ಹಿನ್ನೆಲೆ ಮಾತನಾಡಿದ ಶ್ರೀರಾಮುಲು, ಸುರೇಶ್ ಅಂಗಡಿ ಸರಳ ಸಜ್ಜನಿಕೆಯ ರಾಜಕಾರಣಿ ಅವರನ್ನು ಕಳೆದುಕೊಂಡು ಬಿಜೆಪಿ ಹಾಗೂ ಅವರ ಕುಟುಂಬ ನೋವಿನಲ್ಲಿದೆ. ಈ ವೇಳೆ ನಾನು ರಾಜಕಾರಣ ಮಾತನಾಡಲ್ಲ. ಸುರೇಶ್ ಅಂಗಡಿ ಸಿಎಂ ಆಗುವ ಬಗ್ಗೆ ಚರ್ಚಿಸಿರೋ ಮಾಹಿತಿ ಕೂಡ ನನಗಿಲ್ಲ ಎಂದರು.