ನವದೆಹಲಿ: 43 ಚೀನಾ ಆ್ಯಪ್ಗಳನ್ನು ಭಾರತದಲ್ಲಿ ನಿಷೇಧ ಮಾಡಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ.
ಇಂದು ಈ ವಿಚಾರವಾಗಿ ಪತ್ರಿಕಾ ಹೇಳಿಯನ್ನು ಬಿಡುಗಡೆ ಮಾಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಸಾರ್ವಭೌಮ ರಾಷ್ಟ್ರಕ್ಕೆ ಇರುವ ಅಧಿಕಾರಗಳ ಅಡಿ ಕೇಂದ್ರ ಸರ್ಕಾರ 43 ಆ್ಯಪ್ಗಳನ್ನು ನಿಷೇಧ ಮಾಡಿದೆ. ಜೊತೆಗೆ ಈ ಆ್ಯಪ್ಗಳು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಗೆ ಧಕ್ಕೆ ತರುವ ಮಾಹಿತಿ ಇರುವುದರಿಂದ ಬ್ಯಾನ್ ಮಾಡಿದ್ದೇವೆ ಎಂದು ತಿಳಿಸಿದೆ.
Advertisement
Advertisement
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಈ 43 ಆ್ಯಪ್ಗಳನ್ನು ನಿಷೇಧ ಮಾಡುವಂತೆ ಗೃಹ ಸಚಿವಾಲಯಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಆಧರಿಸಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ 43 ಆ್ಯಪ್ಗಳನ್ನು ನಿಷೇಧ ಮಾಡಿದೆ ಎಂದು ತಿಳಿಸಿದೆ. ಈ ಹಿಂದೆಯೂ ಕೂಡ ಭಾರತ ಸರ್ಕಾರ ಟಿಕ್ಟಾಕ್ ಸೇರಿದಂತೆ ಸುಮಾರು 118 ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು.
Advertisement
Advertisement
ಗಲ್ವಾನ್ ಘರ್ಷಣೆಯ ನಂತರ ಕಳೆದ ಜೂನ್ 29 ರಂದು ಕೇಂದ್ರ ಸರ್ಕಾರ 59 ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ನಂತರ ಈ 59 ಆ್ಯಪ್ಗಳನ್ನು ಒಳಗೊಂಡಂತೆ ಸೆಪ್ಟಂಬರ್ 2ರಂದು 118 ಆ್ಯಪ್ಗಳನ್ನು ನಿಷೇಧ ಮಾಡಲಾಗಿತ್ತು. ಈಗ ಮತ್ತೆ ಚೀನಾ ದೇಶದ ಅಲಿ ಎಕ್ಸ್ ಪ್ರೆಸ್, ಆಲಿಬಾಬ ವರ್ಕ್ ಬೆಂಚ್ ಮತ್ತು ಕ್ಯಾಮ್ಕಾಡ್ ಸೇರಿದಂತೆ ಸುಮಾರು 43 ಆ್ಯಪ್ಗಳನ್ನು ಬ್ಯಾನ್ ಮಾಡಿದೆ.
ಅಪ್ಲಿಕೇಶನ್ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್ಗಳನ್ನು ನಿಷೇಧಿಸಿ ಎಂದು ಜೂನ್ನಲ್ಲಿ ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.