ಮೈಸೂರು: ಆರ್.ಆರ್ ನಗರದಲ್ಲಿ ಗೆಲ್ಲೋಕಾಗೋಲ್ಲ. ಅದಕ್ಕೆ ಡಿಕೆಶಿ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರೂ ಎಫ್ಐಆರ್ ಹಾಕುತ್ತಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್ಐಆರ್ ಹಾಕಿದ್ದರು. ಸ್ವಲ್ಪ ವ್ಯತ್ಯಾಸ ಆಗಿದ್ದರೆ ಮುನಿರತ್ನ ಜೈಲಿಗೆ ಹೋಗಬೇಕಿತ್ತು. ಈಗ ಕೋರ್ಟ್ ತೀರ್ಪು ಬಂದು ಮತ್ತೆ ಚುನಾವಣೆಗೆ ನಿಲ್ತಿದ್ದಾರೆ. ಹೀಗಾಗಿ ಡಿಕೆಶಿ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಅವರಿಗೆ ಆರ್ ಆರ್ ನಗರದಲ್ಲಿ ಗೆಲ್ಲೋಕೆ ಆಗೋಲ್ಲ ಅಂತ ಹೀಗೆಲ್ಲ ಮಾತನಾಡುತ್ತಾರೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಜಂಬೂ ಸವಾರಿಗೆ 300 ಮಂದಿಗೆ ಮಾತ್ರ ಅವಕಾಶ:
ದಸರಾದ ಕೊನೆ ಹಂತದ ಸಿದ್ಧತೆ ಪರಿಶೀಲನೆ ಮಾಡ್ತಿದ್ದೇವೆ. ಟೆಕ್ನಿಕಲ್ ಕಮಿಟಿಯ ಸೂಚನೆ ಮೀರಿ ಒಂದೇ ಒಂದು ಕಾರ್ಯಕ್ರಮವನ್ನ ಮಾಡಿಲ್ಲ. ಜನ ಸೇರಿಸೋ ಪ್ರಶ್ನೆಯೇ ಇಲ್ಲ. ಉದ್ಘಾಟನೆಗೆ 200 ಮಂದಿ, ಜಂಬೂಸವಾರಿಗೆ 300 ಮಂದಿ ಮಾತ್ರ ಇರುತ್ತಾರೆ. ಭಾಗಿಯಾಗುವ ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ ಎಂದರು. ಇದನ್ನೂ ಓದಿ: ಕೊರೊನಾ ವಾರಿಯರ್ಸ್ಗೆ ಗೌರವ- ಡಾ.ಮಂಜುನಾಥ್ರಿಂದ ಮೈಸೂರು ದಸರಾ ಉದ್ಘಾಟನೆ
Advertisement
Advertisement
ಈ ಬಾರಿ ಎಲ್ಲವು ವರ್ಚುವಲ್ ಆಗಿ ನೇರಪ್ರಸಾರ ಆಗಲಿದೆ. ನಾವು ಆಹ್ವಾನ ಮಾಡಿರುವ ಕೆಲವರು ದಸರಾಗೆ ಬರೋಲ್ಲ. ನಾವು ಬಂದು ಸಮಸ್ಯೆ ಆಗೋದು ಬೇಡ ಅಂತ ಹೇಳಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಯಾವ ಕಾರ್ಯಕ್ರಮವನ್ನು ಮಾಡೋದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.