ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಎರಡು ತಂಡಗಳು ಸಿದ್ಧಗೊಂಡು ಮೈದಾನಕ್ಕಿಳಿಯಲು ತುದಿಗಾಲಲ್ಲಿ ನಿಂತಿದೆ. ಈ ನಡುವೆ ಇಂಗ್ಲೆಂಡ್ನಲ್ಲಿ ಪಂದ್ಯ ನಡೆಯುವ ಕಾರಣ ಅಲ್ಲಿನ ಪಿಚ್ ವೇಗಿಗಳಿಗೆ ನೆರವು ನೀಡಲಿದೆ. ಹಾಗಾಗಿ ಎರಡು ತಂಡಗಳಲ್ಲೂ ಘಟಾನುಘಟಿ ವೇಗಿಗಳಿದ್ದು ಇವರ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ನಿಂತಿದೆ.
Advertisement
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಕೂಡ ಬಲಿಷ್ಠವಾಗಿದ್ದು, ಯಾವ ತಂಡ ಕೂಡ ಅಷ್ಟು ಬೇಗ ಸೋಲೊಪ್ಪಿಕೊಳ್ಳುವ ತಂಡವಲ್ಲ, ಈ ತಂಡಗಳು ಇಂಗ್ಲೆಂಡ್ನ ಸೌತಾಂಪ್ಟನ್ನ ಏಜಸ್ ಬೌಲ್ ಕ್ರೀಡಾಂಗಣದಲ್ಲಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವಾಡುತ್ತಿದೆ. ಇಲ್ಲಿನ ಬಹುತೇಕ ಪಿಚ್ ಪೇಸ್ ಮತ್ತು ಬೌನ್ಸಿ ಪಿಚ್ ಆಗಿರುವುದರಿಂದಾಗಿ ವೇಗಿಗಳಿಗೆ ನೆರವು ನೀಡುತ್ತದೆ. ಹಾಗಾಗಿ ಎರಡು ತಂಡಗಳಲ್ಲಿರುವ ವೇಗಿಗಳು ತಂಡಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು
Advertisement
Advertisement
ಭಾರತ ಹಾಗೂ ನ್ಯೂಜಿಲೆಂಡ್ ತಂಡದಲ್ಲಿ ಕೂಡ ವಿಶ್ವ ಶ್ರೇಷ್ಠ ವೇಗಿಗಳ ದಂಡೇ ಇದೆ. ಭಾರತದ ಪಾಲಯದಲ್ಲಿ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರಿತ್ ಬುಮ್ರಾ, ಮಹಮದ್ ಸಿರಾಜ್ ಇದ್ದಾರೆ. ಇತ್ತ ನ್ಯೂಜಿಲೆಂಡ್ ತಂಡದಲ್ಲಿ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವೇಗ್ನರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಕೈಲ್ ಜೇಮಿಸನ್ ಮತ್ತು ಹೆನ್ರಿ ಅವರನ್ನು ಕಾಣಬಹುದಾಗಿದೆ. ಇದನ್ನೂ ಓದಿ:ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ
Advertisement
ಈ ಎರಡು ತಂಡಗಳ ವೇಗಿಗಳ ಈವರೆಗಿನ ಬಲಾಬಲ ಗಮನಿಸಿದಾಗ ಭಾರತ ವೇಗಿಗಳಾದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರಿತ್ ಬುಮ್ರಾ, ಮಹಮದ್ ಸಿರಾಜ್ ಈವರೆಗೆ ಒಟ್ಟು 223 ಟೆಸ್ಟ್ ಪಂದ್ಯವಾಡಿ 730 ವಿಕೆಟ್ ಕಬಳಿಸಿದ್ದಾರೆ. 29.53 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಭಾರತ ವೇಗಿಗಳು 25 ಬಾರಿ 5 ವಿಕೆಟ್ ಗೊಂಚಲು ಪಡೆದರೆ 10 ವಿಕೆಟ್ಗಳನ್ನು 2 ಬಾರಿ ಪಡೆದಿದ್ದಾರೆ. ಇದನ್ನೂ ಓದಿ:ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್!
ನ್ಯೂಜಿಲೆಂಡ್ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವೇಗ್ನರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಕೈಲ್ ಜೇಮಿಸನ್ ಮತ್ತು ಹೆನ್ರಿ ಈವರೆಗೆ ಒಟ್ಟು 249 ಟೆಸ್ಟ್ ಪಂದ್ಯವಾಡಿ 945 ವಿಕೆಟ್ ಪಡೆದಿದ್ದಾರೆ. 28.08 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 34 ಬಾರಿ 5 ವಿಕೆಟ್ ಗೊಂಚಲು ಪಡೆದರೆ 3 ಬಾರಿ 10 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಕೊಹ್ಲಿ, ವಿಲಿಯಮ್ಸನ್ ನಾಯಕತ್ವ ರೆಕಾರ್ಡ್ – ಯಾರು ಬೆಸ್ಟ್ ?
ಈ ರೆಕಾರ್ಡ್ಗಳನ್ನು ಗಮನಿಸಿದಾಗ ಎರಡು ತಂಡದ ವೇಗದ ಬೌಲಿಂಗ್ ವಿಭಾಗ ತಂಡದ ಪ್ರಮುಖ ಅಸ್ತ್ರವಾಗಿದೆ. ಹಾಗಾಗಿ ವಿಶ್ವದ ಈ ಎರಡು ಬಲಾಢ್ಯ ತಂಡಗಳ ಕಾದಾಟ ಎಲ್ಲರ ಗಮನಸೆಳೆಯುತ್ತಿದೆ.