ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ನೂರಾರು ಬೆಂಬಲಿಗರ ಹಿಂಸಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿರುವ ಬೆನ್ನಲ್ಲೇ ಅವರ ಖಾಸಗಿ ಹಾಗೂ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಸಂಸ್ಥೆ ಶಾಶ್ವತವಾಗಿ ಬ್ಲಾಕ್ ಮಾಡಿದೆ.
ಅಮೆರಿಕ ಸಂಸತ್ ಭವನದ ಮೇಲಿನ ಮುತ್ತಿಗೆ ಘಟನೆ ಹಿನ್ನೆಲೆ ಹಾಗೂ ಟ್ವಿಟ್ಟರ್ ನಿಯಮಗಳ ಉಲ್ಲಂಘನೆ ಮಾಡಿರುವುದರಿಂದ ಟ್ರಂಪ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದೆ. ಈ ಬಗ್ಗೆ ಟ್ವಿಟ್ಟರ್ ಈ ಹಿಂದೆ ಎಚ್ಚರಿಕೆಯನ್ನು ನೀಡಿತ್ತು. ಇದರ ಹೊರತಾಗಿ ಟ್ರಂಪ್ ಪ್ರಚೋದನಕಾರಿ ಹೇಳಿಕೆಯನ್ನು ನೀಡಿತ್ತಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ.
Advertisement
After close review of recent Tweets from the @realDonaldTrump account and the context around them we have permanently suspended the account due to the risk of further incitement of violence.https://t.co/CBpE1I6j8Y
— Twitter Safety (@TwitterSafety) January 8, 2021
Advertisement
ಕ್ಯಾಪಿಟಲ್ ಹಿಲ್ ಹಿಂಸಾಚಾರದಿಂದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಟ್ರಂಪ್ ವಿರುದ್ಧ ಕ್ರಮಕೈಗೊಳ್ಳುವಂತೆ ಧ್ವನಿ ಕೇಳಿ ಬಂದಿತ್ತು. 88 ಮಿಲಿಯನ್ ಫಾಲೋವರ್ಸ್ ಹೊಂದಿರುವ ಟ್ರಂಪ್ ಟ್ವಿಟ್ಟರ್ ಖಾತೆಯನ್ನು ಬುಧವಾರ ತಾತ್ಕಾಲಿಕವಾಗಿ ರುದ್ದು ಮಾಡಲಾಗಿತ್ತು. ಇಂತಹ ಪ್ರಚೋದನಕಾರಿ ಟ್ವಿಟ್ಗಳು ಹೆಚ್ಚಾರೆ ಖಾತೆಯನ್ನು ಶಾಶ್ವತವಾಗಿ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿತ್ತು. ನಿಮ್ಮ ಖಾತೆಯ ಮೇಲೆ ನಿಗಾ ಇರಿಸಲಾಗುವುದು ಎಂದೂ ಸೂಚನೆಯನ್ನು ನೀಡಿತ್ತು.
Advertisement
Advertisement
ಅಮೆರಿಕದ ಜನರೊಂದಿಗೆ ಸಂಭಾಷಣೆ, ಜನರ ಕಷ್ಟ, ಸರ್ಕಾರದ ಉತ್ತಮ ಕಾರ್ಯಗಳ ಕುರಿತಾಗಿ ಚರ್ಚೆ ನಡೆಸಲು ಉತ್ತಮ ವೇದಿಕೆ ಟ್ವಿಟ್ಟರ್ ಆಗಿತ್ತು. ಆದರೆ ತಪ್ಪು ಮಾಹಿತಿ ರವಾನೆ, ಪ್ರಚೋದನೆ, ದ್ವೇಷ ಭಾಷಣ ಹರಡಲು ಟ್ರಂಪ್ ಬಳಸಿಕೊಳ್ಳುತ್ತಿದ್ದರು. ಈ ಹಿಂದೆಯೂ ಟ್ವಿಟ್ಟರ್ ಅನೇಕ ಬಾರಿ ಎಚ್ಚರಿಕೆ ನೀಡಿತ್ತು. ಇದೀಗ ಶಾಶ್ವತವಾಗಿ ಖಾತೆಯನ್ನು ರದ್ದು ಮಾಡಿದೆ.