ನವದೆಹಲಿ: ಬಾಲಿವುಡ್ನ ಹೆಸರಾಂತ ನಿರ್ಮಾಪಕ ಕರಣ್ ಜೋಹರ್ ಟ್ರೋಲ್ಗೆ ಒಳಗಾಗಿರುವುದು, ಅವರ ವಿರುದ್ಧ ಟೀಕಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಈ ರೀತಿಯ ಘಟನೆಗಳು ನಡೆದಿದೆ. ಇದಾವುದಕ್ಕೂ ಕರಣ್ ಜೋಹರ್ ತಲೆ ಕೆಡಿಸಿಕೊಂಡವರಲ್ಲ. ಯಾವುದೇ ಟ್ರೋಲ್ಗಳಿಗೆ ಕಿವಿಗೊಡದೆ ತಮ್ಮ ಕೆಲಸದ ಕಡೆ ಚಿತ್ತ ಹರಿಸುತ್ತಿದ್ದರು. ಆದರೆ ಇದೀಗ ಅವರು ತುಂಬಾ ನೊಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರಂತೆ.
Advertisement
ಹೌದು ಇತ್ತೀಚೆಗೆ ಅವರ ವಿರುದ್ಧ ವಿಪರೀತ ದಾಳಿ ನಡೆಯುತ್ತಿದ್ದು, ಇದರಿಂದಾಗಿ ಕರಣ್ ಜೋಹರ್ ಮಾನಸಿಕವಾಗಿ ಕುಗ್ಗಿದ್ದಾರಂತೆ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರಂತೆ. ಹೀಗೆಂದು ಅವರ ಆತ್ಮೀಯ ಸ್ನೇಹಿತರು ತಿಳಿಸಿರುವ ಕುರಿತು ವರದಿಯಾಗಿದೆ. ಕರಣ್ ಜೋಹರ್ ಧೋನಿ ಸಿನಿಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದಾರೆ.
Advertisement
Advertisement
ಈ ಎಲ್ಲ ಬೆಳವಣಿಗೆಗಳಿಂದಾಗಿ ಇತ್ತೀಚೆಗೆ ಅವರು ಕೆಲ ಪ್ರಮುಖ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಅನ್ಫಾಲೋ ಮಾಡಿದ್ದರು. ಕೆಲವರನ್ನು ಮಾತ್ರ ಫಾಲೋ ಮಾಡುತ್ತಿದ್ದರು. ಇದಾದ ಬಳಿಕ ಅವರು ಇನ್ನೂ ಕುಗ್ಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಅಲ್ಲದೆ ಈ ವರೆಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕಿಲ್ಲ.
Advertisement
ಕರಣ್ ಜೋಹರ್ ಅವರು ಮಾತನಾಡಿದ ಮಾತುಗಳು, ಅವರ ವಿಡಿಯೋಗಳು ಇದೀಗ ಮುನ್ನೆಲೆಗೆ ಬರುತ್ತಿದ್ದು, ಸಾಕಷ್ಟು ಟ್ರೋಲ್ ಆಗುತ್ತಿವೆ. ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತವಿದೆ. ಇದಕ್ಕೆ ಸಾಕ್ಷಿಯೇ ಕೆಲವು ನಿರ್ಮಾಪಕರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಸ್ಟಾರ್ಗಳ ಮಕ್ಕಳಿಗೆ ಬೆಂಬಲ ನೀಡುತ್ತಾರೆ, ಹೊರಗಿನಿಂದ ಬಂದವರನ್ನು ಲೇವಡಿ ಮಾಡುತ್ತಾರೆ, ಉದ್ದೇಶಪೂರ್ವಕವಾಗಿ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ ಎಂಬ ಆರೋಪ ಕರಣ್ ಜೋಹರ್ ಮೇಲಿದೆ. ಅಲ್ಲದೆ ಸ್ವಜನಪಕ್ಷಪಾತದ ಕೇಂದ್ರ ಬಿಂದು ಕರಣ್ ಜೋಹರ್, ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕರಣ್ ಅವರ ಈ ವರ್ತನೆಯೂ ಒಂದು ಕಾರಣ ಎಂದು ಆರೋಪಿಸಲಾಗುತ್ತಿದೆ. ಇದರಿಂದ ಕರಣ್ ತೀವ್ರ ನೊಂದಿದ್ದಾರಂತೆ.
ಆರೋಗ್ಯವೂ ಹದಗೆಟ್ಟಿದೆ
ಕರಣ್ ಮಾನಸಿಕವಾಗಿ ಘಾಸಿಗೊಂಡಿರುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರಿದ್ದು, ಅವರ ಮಾನಸಿಕ ಹಾಗೂ ಆರೋಗ್ಯದ ಸ್ಥಿತಿ ಈಗ ಹದಗೆಟ್ಟಿದೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಈ ಹಿಂದೆ ಅವರನ್ನು ಮಾತ್ರ ಟ್ರೋಲ್ ಮಾಡಲಾಗುತ್ತಿತ್ತು. ಈಗ ಅವರಿಗೆ ಆಪ್ತರಾಗಿರುವವರ ವಿರುದ್ಧವೂ ದಾಳಿ ನಡೆಯುತ್ತಿದೆ. ಅವರ ಮೂವರು ಮಕ್ಕಳಿಗೆ ಜೀವ ಬೆದರಿಕೆ ಕರೆ ಬರುತ್ತಿವೆ. ಅಲ್ಲದೆ ಸುಶಾಂತ್ ಘಟನೆಗೆ ಸಂಬಂಧವೇ ಇಲ್ಲದ ಅನನ್ಯಾ ಪಾಂಡೆಯಂತಹ ನಟಿಯರನ್ನು ಟೀಕಿಸಲಾಗುತ್ತಿದೆ. ಸುಶಾಂತ್ ಸಾವಿಗೆ ಪರಿಹಾರ ನೀಡಲು ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಆಕೆಗೆ ಬೆದರಿಸಲಾಗುತ್ತಿದೆಯಂತೆ.
ಬಾಲಿವುಡ್ನಲ್ಲಿ ಯಾರೂ ಬೆಂಬಲ ನೀಡುತ್ತಿಲ್ಲ
ಕರಣ್ ಜೋಹರ್ ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ. ಅವರು ಸುಧಾರಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಫೋನ್ನಲ್ಲಿ ನನ್ನ ಜೊತೆ ಮಾತನಾಡುವಾಗ ಬಿಕ್ಕಿ ಬಿಕ್ಕಿ ಅಳುತ್ತಾರೆ. ಈ ರೀತಿ ಆಗಲು ನಾನು ಮಾಡಿರುವ ತಪ್ಪಾದರೂ ಏನೆಂದು ಪ್ರಶ್ನಿಸುತ್ತಿದ್ದಾರೆ ಎಂದು ಅವರ ಆತ್ಮೀಯ ಸ್ನೇಹಿತರು ತಿಳಿಸಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಬಾಲಿವುಡ್ನಲ್ಲಿ ಯಾರೂ ಅವರ ಬೆಂಬಲಕ್ಕೆ ಬರುತ್ತಿಲ್ಲ ಎಂಬ ಬೇಸರ ಸಹ ಅವರಲ್ಲಿ ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಇತ್ತೀಚೆಗೆ ಮುಂಬೈ ಚಿತ್ರೋತ್ಸವದ ಮಂಡಳಿಗೂ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.