ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರುಗಳ ಮೇಲೆ ಕ್ರೇಜ್ ಇದೆ. ಈಗಾಗಲೇ ಅವರ ಬಳಿ ಅನೇಕ ವೆರೈಟಿ ಕಾರುಗಳಿಗೆ. ಆದರೆ ಇದೀಗ ದರ್ಶನ್ ಹೊಸ ವಾಹನವೊಂದನ್ನು ಖರೀದಿಸಿದ್ದಾರೆ.
ನಟ ದರ್ಶನ್ ಹೊಸ ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಸದ್ಯಕ್ಕೆ ದರ್ಶನ್ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ನಲ್ಲಿದ್ದಾರೆ. ಪ್ರಾಣಿಗಳ ಜೊತೆಗೆ ಹೆಚ್ಚಾಗಿ ಸಮಯ ಕಳೆಯುತ್ತಿರುವ ದರ್ಶನ್ ಅವುಗಳಿಗೆ ಉಪಯೋಗವಾಗಲಿ ಎಂದು ಒಂದು ಟ್ರ್ಯಾಕ್ಟರ್ ಖರೀದಿಸಿದ್ದಾರೆ.
Exclusive Pic..
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರು ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ನೂತನ ಟ್ರಾಕ್ಟರ್ ಖರೀದಿಸಿದರು ????????????#ChallengingStarDarshan#DBoss@dasadarshan pic.twitter.com/V25GWsYKdi
— Darshan Thoogudeepa Fans – CSDSK (@CSDSK1) July 15, 2020
ಹೊಸ ಟ್ರ್ಯಾಕ್ಟರ್ ಖರೀದಿಸಿದ ನಂತರ ತಮ್ಮ ಸ್ನೇಹಿತರನ್ನು ಜೊತೆ ಕೂರಿಸಿಕೊಂಡು ಓಡಿಸಿದ್ದಾರೆ. ದರ್ಶನ್ ಟ್ರ್ಯಾಕ್ಟರ್ ಓಡಿಸುತ್ತಿರುವ ವಿಡಿಯೋವನ್ನು ಅಭಿಮಾನಿಯೊಬ್ಬರು ರೆಕಾರ್ಡ್ ಮಾಡಿಕೊಂಡು ತನ್ನ ಫೇಸ್ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಟ್ರ್ಯಾಕ್ಟರ್ ಓಡಿಸುತ್ತಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯಕ್ಕೆ ಸಿನಿಮಾಗೆ ಸಂಬಂಧಿಸಿದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಚಿತ್ರೀಕರಣ ಮುಗಿದು ಬಿಡುಗಡೆಗೆ ರೆಡಿಯಾಗಿದೆ. ಆದರೆ ಕೊರೊನಾದಿಂದ ಸದ್ಯಕ್ಕೆ ಸಿನಿಮಾ ಬಿಡುಗಡೆಯಾಗುವುದಿಲ್ಲ.
ನಟ ದರ್ಶನ್ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾದಗಿನಿಂದ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ನಲ್ಲಿ ಕಾಲಕಳೆಯುತ್ತಿದ್ದಾರೆ. ಅಲ್ಲಿ ತಮ್ಮ ಪ್ರೀತಿಯ ಪ್ರಾಣಿಗಳ ಆರೈಕೆ ಮಾಡುತ್ತಾ ಖುಷಿಯಿಂದ ಕಾಲಕಳೆಯುತ್ತಿದ್ದಾರೆ. ಆಗಾಗ ದರ್ಶನ್ ಪ್ರಾಣಿಗಳ ಸೇವೆ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.