ಚೆನ್ನೈ: ನಮಗೆ ಟೂರ್ನಮೆಂಟ್ ಗೆಲ್ಲೋದು ಮುಖ್ಯ, ಮೊದಲ ಪಂದ್ಯ ಅಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಐಪಿಎಲ್ ಪಂದ್ಯಗಳು ಶುಕ್ರವಾರ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ.
Advertisement
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ಮೊದಲ ಪಂದ್ಯದಲ್ಲಿ ಸೋತಿದ್ದಕ್ಕೆ ತಂಡ ನಿರಾಸೆ ಆಗಬಾರದು. ಚಾಂಪಿಯನ್ಶಿಪ್ ಗೆಲ್ಲೋದು ಮುಖ್ಯವೇ ಹೊರತು ಮೊದಲ ಮ್ಯಾಚ್ ಅಲ್ಲ. ಮೊದಲ ಪಂದ್ಯದಲ್ಲಿ ನಮ್ಮ ಆಟ ಹೋರಾಟ ಚೆನ್ನಾಗಿತ್ತು. ನಾವು ಅಷ್ಟು ಸರಳವಾಗಿ ಎದುರಾಳಿ ತಂಡ ಗೆಲ್ಲಲು ಅವಕಾಶ ನೀಡಲಿಲ್ಲ. ನಮ್ಮ ಸ್ಕೋರ್ ಬಗ್ಗೆ ಖುಷಿ ಇದೆ. ನಮ್ಮ ಲೆಕ್ಕದ ಪ್ರಕಾರ ತಂಡ ಇನ್ನು 20 ರನ್ ಕಲೆ ಹಾಕಬಹುದಿತ್ತು ಎಂದು ಹೇಳಿದ್ದಾರೆ.
Advertisement
Advertisement
ನಾವು ಕೆಲ ತಪ್ಪುಗಳನ್ನ ಮಾಡಿದ್ದೇವೆ. ಕೆಲವೊಮ್ಮೆ ತಪ್ಪುಗಳು ಆಗುತ್ತವೆ. ಆದ್ರೆ ಅವೆಲ್ಲವನ್ನೂ ಮರೆತು ಮುಂದೆ ಹೋಗಬೇಕು. ಪಿಚ್ ಬ್ಯಾಟ್ಸ್ ಮನ್ ಗಳಿಗೆ ಪೂರಕವಾಗಿರಲಿಲ್ಲ ಅನ್ನೋದು ನನ್ನ ಅಭಿಪ್ರಾಯ. ಮುಂದಿನ ಪಂದ್ಯಗಳಲ್ಲಿ ಈ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು
Advertisement
ಕೊನೆಯ ನಾಲ್ಕು ಓವರ್ ಉಳಿದಾಗ ಉತ್ತಮ ಲಯದಲ್ಲಿದ್ದ ಎಬಿ ಡಿವಿಲಿಯರ್ಸ್ ಅವರ ವಿಕೆಟ್ ಪಡೆಯಲು ಪ್ಲಾನ್ ಮಾಡಲಾಗಿತ್ತು. ಹೀಗಾಗಿ ಬುಮ್ರಾ ಮತ್ತು ಬೋಲ್ಟ್ ಬೌಲಿಂಗ್ ಮಾಡಿದರು. ಆದ್ರೆ ನಾವು ಇದರಲ್ಲಿ ಸಫಲರಾಗಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ಹರ್ಷಲ್ ಪಟೇಲ್
#RCB win the #VIVOIPL 2021 season opener against #MI by two wickets.
Scorecard – https://t.co/PiSqZirK1V #MIvRCB #VIVOIPL pic.twitter.com/87Cu6fkXO3
— IndianPremierLeague (@IPL) April 9, 2021
ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡ, 9 ವಿಕೆಟ್ ನಷ್ಟಕ್ಕೆ 159 ರನ್ ಸೇರಿಸಿತ್ತು. ಹರ್ಷಲ್ ಪಟೇಲ್ 27 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಮುಂಬೈ ಟೀಂ ಬೃಹತ್ ಮೊತ್ತದ ಗುರಿಗೆ ಬ್ರೇಕ್ ಹಾಕಿದರು. ಆರ್ಸಿಬಿ ಪರ ಎಬಿ ಡಿಬವಿಲಿಯರ್ಸ್ 48, ಗ್ಲೇನ್ ಮ್ಯಾಕ್ಸ್ ವೆಲ್ 39, ನಾಯಕ ವಿರಾಟ್ ಕೊಹ್ಲಿ 33 ರನ್ ಸೇರಿಸಿದರು. ಅಂತಿಮವಾಗಿ ಆರ್ ಸಿಬಿ ಎರಡು ವಿಕೆಟ್ ಗಳಿಂದ ಮೊದಲ ಪಂದ್ಯವನ್ನ ತನ್ನದಾಗಿಸಿಕೊಂಡಿತು. ಇದನ್ನೂ ಓದಿ: ಎಬಿಡಿ ಸ್ಫೋಟಕ ಆಟ – ಕೊನೆಯ ಎಸೆತದಲ್ಲಿ ಆರ್ಸಿಬಿಗೆ ರೋಚಕ ಜಯ