ಚಿಕ್ಕಬಳ್ಳಾಪುರ: ಟೀ ಕುಡಿದು ಅಂಗಡಿ ಮುಂದೆಯೇ ಎಂಜಲು ಉಗಿದ ಗ್ರಾಹಕನನ್ನು ಮಾಲೀಕ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಉಲ್ಲಪ್ಪನಹಳ್ಳಿಯಲ್ಲಿ ನಡೆದಿದೆ.
26 ವರ್ಷದ ಮುನಿಕೃಷ್ಣ ಕೊಲೆಯಾದ ಯುವಕ. ಅಂಗಡಿ ಮಾಲೀಕ 26 ವರ್ಷದ ಚೇತನ್ ಕೊಲೆ ಆರೋಪಿ. ಪ್ರತಿದಿನ ಬೆಳಿಗ್ಗೆ ಚೇತನ್ ಅಂಗಡಿ ಬಳಿ ಬಂದು ಮುನಿಕೃಷ್ಣ ಟೀ ಕುಡಿಯುತ್ತಿದ್ದ. ಅದೇ ರೀತಿ ಇಂದು ಸಹ ಟೀ ಕುಡಿದು ಅದೇ ಅಂಗಡಿ ಮುಂಭಾಗ ಎಂಜಲು ಉಗಿದಿದ್ದಾನೆ. ಇದೇ ವಿಚಾರಕ್ಕೆ ಮುನಿಕೃಷ್ಣ ಹಾಗೂ ಚೇತನ್ ನಡುವೆ ಮಾತಿಗೆ ಬೆಳೆದು ದೊಡ್ಡ ಗಲಾಟೆಯಾಗಿದೆ.
Advertisement
Advertisement
ಈ ವೇಳೆ ಚೇತನ್ ಚಾಕುವಿನಿಂದ ಮುನಿಕೃಷ್ಣ ಎದೆ ಮತ್ತು ಹೊಟ್ಟೆಭಾಗಕ್ಕೆ ಇರಿದಿದ್ದು ಪರಿಣಾಮ ಮುನಿಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾನೆ. ಈ ಸಂಬಂಧ ಉಲ್ಲಪ್ಪನಹಳ್ಳಿಗೆ ಭೇಟಿ ನೀಡಿದ ಚಿಂತಾಮಣಿ ಗ್ರಾಮಾಂತರ ಪೊಲೀಸರು ಆರೋಪಿ ಚೇತನ್ ನನ್ನ ಬಂಧಿಸಿದ್ದು ಮುಂಜಾಗ್ರತಾ ಕ್ರಮವಾಗಿ ಉಲ್ಲಪ್ಪನಹಳ್ಳಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಅಂತ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.