ಬೆಂಗಳೂರು: ಟಿಕ್ಟಾಕ್, ಹೆಲೋ ಆ್ಯಪ್ ಸೇರಿದಂತೆ ಚೀನಾದ 59 ಮೊಬೈಲ್ ಆ್ಯಪ್ಗಳನ್ನ ಕೇಂದ್ರ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಟಿಕ್ಟಾಕ್ ನಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಿದ್ದ ಕೆಲ ನೆಟ್ಟಿಗರಿಗೆ ಬೇಸರವಾದ್ರೆ, ಬಹುತೇಕರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
https://twitter.com/Monu_memer/status/1277651268840779776
Advertisement
ಟಿಕ್ಟಾಕ್ ಫೋಟೋಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿಯನ್ನು ನೆಟ್ಟಿಗರು ಸಲ್ಲಿಸಿದ್ದಾರೆ. ಇನ್ನು ಟಿಕ್ಟಾಕ್ ಮೂಲಕ ಫೇಮಸ್ ಆಗಿದ್ದ ಬಳಕೆದಾರರು, ಇಷ್ಟು ದಿನ ಮಾಡಿದೆಲ್ಲ ವ್ಯರ್ಥವಾಯ್ತು ಅನ್ನೋ ರೀತಿಯ ಬರಹಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಇದೆಲ್ಲ ಒಂದು ಕಡೆಯಾದ್ರೆ ಪ್ರಧಾನಿ ಮೋದಿ ನೆರೆಯ ವೈರಿ ಚೀನಾ ಮೇಲೆ ಡಿಜಿಟಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ಬರೆದುಕೊಂಡು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
Advertisement
#Tiktok is banned but not pubg…
meanwhile pubg #PUBG pic.twitter.com/4Eh7Ivwop9
— ज्योन सीना (@Jyon_Cena) June 29, 2020
Advertisement
ಗಲ್ವಾನಾ ಗಡಿಯಲ್ಲಿ ನಡೆದ ಘರ್ಷಣೆ ಬಳಿಕ ಚೀನಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಚೀನಾದ ವಸ್ತುಗಳ ಬಳಕೆಯನ್ನು ನಿಲ್ಲಿಸಿ ಎಂದು ಬಾಯ್ಕಟ್ ಚಿನಾ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು. ಸರ್ಕಾರದ ಘೋಷಣೆಗೂ ಮುನ್ನವೇ ಹಲವರು ಚೀನಾದ ಆ್ಯಪ್ಗಳನ್ನು ಅನ್ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದರು. ಇದೀಗ 59 ಆ್ಯಪ್ ಗಳನ್ನು ಬ್ಯಾನ್ ಮಾಡಿರೋ ಸರ್ಕಾರ, ಮೊಬೈಲ್ಗಳಲ್ಲಿ ಚೀನಾದ ಆ್ಯಪ್ಗಳನ್ನು ತೆಗೆದು ಹಾಕುವಂತೆ ಸೂಚನೆ ನೀಡಿದೆ.
Advertisement
Good Bye #TikTok ????????????????????pic.twitter.com/d9U62LZG0n
— Salaar (@Thisisforprabha) June 29, 2020