ಚೆನ್ನೈ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 14ನೇ ಆವೃತ್ತಿಯ ಐಪಿಎಲ್ನಲ್ಲಿ ಒಂದೇ ಪಂದ್ಯದಲ್ಲಿ ಎರಡು ಮೈಲಿಗಲ್ಲನ್ನು ತಲುಪಿ ತನ್ನ ಬ್ಯಾಟಿಂಗ್ ವೈಭವವನ್ನು ತೋರಿದ್ದಾರೆ.
Advertisement
ಐಪಿಎಲ್ನ 9 ಪಂದ್ಯದಲ್ಲಿ ಪರಸ್ಪರ ಎದುರುಬದುರಾದ ಮುಂಬೈ ಮತ್ತು ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಪರ ಆರಂಭಿಕರಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 32 ರನ್( 35 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ 28 ರನ್ ಬಾರಿಸುತ್ತಿದ್ದಂತೆ ರೋಹಿತ್ ಶರ್ಮಾ ನಾಯಕನಾಗಿ 4000 ರನ್ ಪೂರೈಸಿದರು. ಈ ಮೂಲಕ ನಾಯಕನಾಗಿ ಟಿ20 ಕ್ರಿಕೆಟ್ನಲ್ಲಿ 4 ಸಾವಿರ ರನ್ ಪೂರೈಸಿದ ಹೊಸ ಮೈಲುಗಲ್ಲು ಸ್ಥಾಪಿಸಿದರು. ಈ ಮೊದಲು ಈ ಮೈಲುಗಲ್ಲು ಸ್ಥಾಪಿಸಿದ ಭಾರತೀಯ ನಾಯಕರಲ್ಲಿ ವಿರಾಟ್ ಕೊಹ್ಲಿ 6044 ರನ್ಗಳೊಂದಿಗೆ ಮುಂಚೂಣಿಯಲ್ಲಿ ಕಾಣಿಸಿಕೊಂಡರೆ, ನಂತರ 5,872 ರನ್ಗಳೊಂದಿಗೆ ಚೆನ್ನೈ ತಂಡದ ನಾಯಕ ಧೋನಿ ಕಾಣಿಸಿಕೊಂಡಿದ್ದಾರೆ. ಆ ಬಳಿಕ 3ನೇ ಸ್ಥಾನದಲ್ಲಿ 4,272 ರನ್ಗಳಿಸಿರುವ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಇದ್ದಾರೆ.
Advertisement
Advertisement
ಇದೇ ಪಂದ್ಯದಲ್ಲಿ ರೋಹಿತ್ ಐಪಿಎಲ್ನಲ್ಲಿ ಸಿಕ್ಸರ್ನಲ್ಲೂ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ. ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಚೆನ್ನೈ ತಂಡದ ನಾಯಕ ಧೋನಿ ಅವರನ್ನು ಹಿಂದಿಕ್ಕಿ 3 ಸ್ಥಾನಕ್ಕೆ ನೆಗೆದಿದ್ದಾರೆ. ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿರುವ ಪಟ್ಟಿಯಲ್ಲಿ 351 ಸಿಕ್ಸ್ ನೊಂದಿಗೆ ಕ್ರೀಸ್ ಗೇಲ್ ಪ್ರಥಮ ಸ್ಥಾನದಲ್ಲಿದ್ದರೆ. ಎರಡನೇ ಸ್ಥಾನದಲ್ಲಿ 240 ಸಿಕ್ಸರ್ ಗಳೊಂದಿಗೆ ಅರ್ಸಿಬಿ ತಂಡದ ಆಟಗಾರ ಎ.ಬಿ.ಡಿ ವಿಲಿಯರ್ಸ್ ಕಾಣಿಸಿಕೊಂಡಿದ್ದಾರೆ. ಇದೀಗ ರೋಹಿತ್ ಶರ್ಮಾ 217 ಸಿಕ್ಸ್ ಸಿಡಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದು, ನಂತರದ 4 ಸ್ಥಾನದಲ್ಲಿ ಧೋನಿ 216 ಸಿಕ್ಸರ್ ನೊಂದಿಗೆ ಕೇವಲ ಒಂದು ಸಿಕ್ಸ್ನಿಂದ ಹಿಂದೆ ಉಳಿದಿದ್ದಾರೆ.
Advertisement
ಮುಂದಿನ ಪಂದ್ಯಗಳಲ್ಲಿ ಈ ಆಟಗಾರರ ಮಧ್ಯೆ ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮುಂಚೂಣಿಯಾಗಿ ಕಾಣಿಸಿಕೊಳ್ಳಲು ಫೈಟ್ ಶುರುವಾಗಲಿದೆ.