ಲಂಡನ್: ದೇಹದ ವಿವಿಧ ಭಾಗಗಳಲ್ಲಿ ಖದೀಮರು ಚಿನ್ನ ಸಾಗಾಟ ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ, ಜೈಲಿನಲ್ಲಿ ತನಗೆ ನೀಡುವ ಆಹಾರ ಸಾಲುತ್ತಿಲ್ಲವೆಂದು ಸಮೋಸಾವನ್ನು ಗುದನಾಳದಲ್ಲಿ ಅಡಗಿಸಿಟ್ಟುಕೊಂಡು ಸಿಕ್ಕಿಬಿದ್ದ ಅಚ್ಚರಿಯ ಘಟನೆ ನಡೆದಿದೆ.
ಹೌದು. ಇಂಗ್ಲೆಂಡ್ನ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು 2020ರಲ್ಲಿ ಬಂಧಿಸಿದ್ದವರ ಪಟ್ಟಿಯನ್ನು ತರಿಸಿ ಪರಿಶೀಲನೆ ನಡೆಸಿದರು. ವಿಚಿತ್ರ ಎಂದರೆ ಅದರಲ್ಲಿ ವ್ಯಕ್ತಿ ಒಬ್ಬ ಸಮೋಸಾವನ್ನು ಗುದನಾಳದಲ್ಲಿ ಅಡಗಿಸಿಟ್ಟು ಸಿಕ್ಕಿಬಿದ್ದವನಾಗಿದ್ದಾನೆ.
Advertisement
Advertisement
ಬರ್ಮಿಂಗ್ಹ್ಯಾಮ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದವರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾಗ ಶಂಕಿತನೊಬ್ಬ ತನ್ನ ಒಳ ಉಡುಪಿನಲ್ಲಿ ಸಮೋಸಾ ಇರಿಸಿಕೊಂಡಿದ್ದಾನೆ. ಈ ವೇಳೆ ಆತನನ್ನು ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಪ್ರಶ್ನೆ ಮಾಡಿದಾಗ, ಜೈಲಿನಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟವಾಗಿಲ್ಲ. ಆ ಆಹಾರದಿಂದ ನನಗೆ ತೃಪ್ತಿಲ್ಲ. ಅಲ್ಲದೇ ಅವರು ನೀಡುತ್ತಿರುವ ಆಹಾರ ನನಗೆ ಸಾಲುತ್ತಿಲ್ಲ ಎಂದು ಸಮೋಸಾವನ್ನು ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ವ್ಯಕ್ತಿಯ ಉತ್ತರ ಕೇಳಿ ಪೊಲೀಸರೇ ಒಂದು ಬಾರಿ ದಂಗಾಗಿ ಹೋಗಿದ್ದಾರೆ.
Advertisement
Advertisement
ಈ ಕುರಿತಂತೆ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸ್ ಕ್ರಿಮಿನಲ್ ಜಸ್ಟೀಸ್ ವಿಭಾಗದ ಇನ್ಸ್ಪೆಕ್ಟರ್ ಮಂಜ್ ಅಹಿರ್ ಮಾತನಾಡಿ, ನಾವು ಎಷ್ಟೋ ರೀತಿಯ ಘಟನೆಗಳನ್ನು ನೋಡಿದ್ದೇವೆ. ಆದ್ರೆ ನನ್ನ ಮನಸ್ಸಿಗೆ ನಾಟಿರುವ ಘಟನೆ ಅಂದ್ರೆ ಒಬ್ಬ ವ್ಯಕ್ತಿಯನ್ನು ಪರಿಶೀಲನೆ ಮಾಡಿದಾಗ ಆತ ತನ್ನ ಪೃಷ್ಠದ ನಡುವೆ ಸಮೋಸವನ್ನು ಅಡಗಿಸಿಟ್ಟುಕೊಂಡ ಘಟನೆ. ಆಹಾರವು ಪ್ರತಿಯೊಬ್ಬರಿಗೂ ಮುಖ್ಯ. ತನ್ನ ಹೊಟ್ಟೆಗಾಗಿ ಆತ ಸಮೋಸವನ್ನು ಕದಿಯಲು ಬಯಸಿದ್ದಾನೆ ಎಂದು ಹೇಳಿದರು.
ಹೀಗೆ ಈ ವ್ಯಕ್ತಿ ಸಮೋಸಾವನ್ನು ಕದ್ದರೆ ಮತ್ತೊಬ್ಬ ವ್ಯಕ್ತಿ ವೆಸ್ಟ್ ಮಿಡ್ಲ್ಯಾಂಡ್ಸ್ ನ ಓಲ್ಡ್ಬರಿಯ ಕಸ್ಟಡಿಯಲ್ಲಿದ್ದಾಗ ಸಿಬ್ಬಂದಿಯಿಂದ ತಾನು ಪಡೆದ ಸೌಲಭ್ಯ ಹಾಗೂ ಆರೈಕೆಗಾಗಿ ಧನ್ಯವಾದ ಹೇಳಲು ಒಂದು ಚಾಕ್ಲೆಟ್ ಡಬ್ಬವನ್ನು ಅಧಿಕಾರಿಗಳಿಗೆ ಖರೀದಿಸಿ ನೀಡಿದ್ದಾನೆ.