ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪಾಲಾಗಿರುವ ನಟಿ ರಾಗಿಣಿ ದ್ವಿವೇದಿ ಜೈಲಿನಲ್ಲಿ ಜಾರಿಬಿದ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.
ಹೌದು. ನನಗೆ ಸ್ಲಿಪ್ ಡಿಸ್ಕ್ ಆಗಿದೆ ಸಿಕ್ಕಾಪಟ್ಟೆ ಬೆನ್ನು ನೋವು. ಖಾಸಗಿ ಆಸ್ಪತ್ರೆಯಲ್ಲಿ ನಾನು ಚಿಕಿತ್ಸೆ ಪಡೆದುಕೊಳ್ತೀನಿ ಅಂತ ರಾಗಿಣಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Advertisement
Advertisement
ನಾನು ಜೈಲಿನಲ್ಲಿ ಚಿಕಿತ್ಸೆ ಪಡೆಯಲು ಪ್ರಯತ್ನ ಮಾಡಿದೆ. ಆದರೆ ಪರಿಣಾಮಕಾರಿ ಚಿಕಿತ್ಸೆ ಇಲ್ಲಿ ಸಿಗುತ್ತಾ ಇಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆಗೆ ನನ್ನನ್ನು ರವಾನೆ ಮಾಡಿ. ಯಾವುದೇ ಸಾಕ್ಷ್ಯ ನಾಶ ಮಾಡೋದಿಲ್ಲ. ಸ್ಲಿಪ್ ಡಿಸ್ಕ್ ಆಗಿರೋ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ರಾಗಿಣಿ ಅರ್ಜಿ ಹಿನ್ನೆಲೆಯಲ್ಲಿ ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ರಾಗಿಣಿ, ಸಂಜನಾ ಇರುವ ಜೈಲು ಕೊಠಡಿಗೆ ಬಂದಿದೆ ಹೊಸ ಟಿವಿ
Advertisement
Advertisement
ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಜಾಮೀನು ಅರ್ಜಿಯ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟೆಂಬರ್ 21ರಂದು ನಡೆಸಿತ್ತು. ವಿಚಾರಣೆಯ ಬಳಿಕ ಆದೇಶವನ್ನು ನ್ಯಾಯಾಧೀಶರು ಕಾಯ್ದಿರಿಸಿದ್ದರು. ಇತ್ತ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್ 24ರಂದು ನ್ಯಾಯಲಯ ಮುಂದೆ ಬಂದಿತ್ತು. ವಾದ- ಪ್ರತಿವಾದ ಆಲಿಸಿದ್ದ ನ್ಯಾಯಾಧೀಶರು ಸೆ.29ಕ್ಕೆ ಆದೇಶ ಕಾಯ್ದಿರಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಹಿನ್ನೆಲೆ ಇಬ್ಬರು ನಟಿಯರನ್ನು ವಿಚಾರಣೆ ನಡೆಸಲು ನ್ಯಾಯಾಲಯದಿಂದ ಐದು ದಿನ ಅನುಮತಿ ಪಡೆದುಕೊಂಡಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆ ರಾಗಿಣಿ ಮತ್ತು ಸಂಜನಾ ಇಬ್ಬರು ಪರಪ್ಪನ ಅಗ್ರಹಾರದಲ್ಲಿಯೇ ಇಡಿ ವಿಚಾರಣೆ ಎದುರಿಸಿದ್ದರು.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯವರ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆಯಾಗಿದೆ. ಇಬ್ಬರೂ ನಟಿಯರ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 23ರವರೆಗೆ ವಿಸ್ತರಿಸಿ ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈ ಆದೇಶದೊಂದಿಗೆ ಇಬ್ಬರೂ ನಟಿಯರು 23ರವರೆಗೂ ಜೈಲುಶಿಕ್ಷೆ ಅನುಭವಿಸುವುದು ಖಾಯಂ ಆಗಿದೆ. ಇದನ್ನೂ ಓದಿ: ರಾಗಿಣಿ, ಸಂಜನಾಗೆ ಬಿಗ್ ಶಾಕ್ – ಮೊಬೈಲ್ನಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!